ಕರ್ನಾಟಕ

karnataka

ETV Bharat / sitara

ಹೋಟೆಲ್ ರೂಮ್​​​ನಲ್ಲಿ ಆತ್ಮಹತ್ಯೆಗೆ ಶರಣಾದ ಖ್ಯಾತ ಕಿರುತೆರೆ ನಟಿ - Tamil actress committed suicide in hotel room

ಬುಧವಾರ ಬೆಳಗಿನ ಜಾವ ಸುಮಾರು 2.30 ಕ್ಕೆ ಚಿತ್ರೀಕರಣದಿಂದ ಹೋಟೆಲ್​​​ ರೂಮ್​ಗೆ ವಾಪಸಾದ ನಟಿ ಚಿತ್ರಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿತ್ರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Actress Chitra committed suicide
ನಟಿ ಚಿತ್ರ ಆತ್ಮಹತ್ಯೆ

By

Published : Dec 9, 2020, 10:50 AM IST

Updated : Dec 9, 2020, 11:19 AM IST

ಈ ವರ್ಷ ಚಿತ್ರರಂಗ ಅನೇಕ ಕಲಾವಿದರನ್ನು ಕಳೆದುಕೊಂಡಿದೆ. ಮೊನ್ನೆಯಷ್ಟೇ ಬಾಲಿವುಡ್ ನಟಿ ದಿವ್ಯಾ ಭಟ್ನಾಗರ್​ ಕೊರೊನಾಗೆ ಬಲಿಯಾಗಿದ್ದರು. ಇಂದು ತಮಿಳು ನಟಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮಿಳು ಕಿರುತೆರೆ ನಟಿ, ನಿರೂಪಕಿ 28 ವರ್ಷದ ಚಿತ್ರಾ ಹೋಟೆಲ್​​​ನ ತಮ್ಮ ರೂಮ್​​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಇದನ್ನೂ ಓದಿ: ಮುಂಬೈನ ಕಿರುತೆರೆ ನಟಿ ದಿವ್ಯಾ ಭಟ್ನಾಗರ್​ ಕೊರೊನಾಗೆ ಬಲಿ

'ಪಾಂಡಿಯನ್ ಸ್ಟೋರ್ಸ್' ಎಂಬ ಧಾರಾವಾಹಿ ಮೂಲಕ ಚಿತ್ರ ಖ್ಯಾತರಾಗಿದ್ದರು. ತಮಿಳುನಾಡಿನ ನಜರತ್​​ಪೇಟ್​ ಎಂಬ ಫೈವ್​ಸ್ಟಾರ್ ಹೋಟೆಲ್​​​ನಲ್ಲಿ ಚಿತ್ರಾ ತಮ್ಮ ಭಾವಿ ಪತಿ ಹೇಮಂತ್ ಎಂಬುವರೊಂದಿಗೆ ಉಳಿದುಕೊಂಡಿದ್ದರು. ಕೆಲವು ತಿಂಗಳ ಹಿಂದೆ ಹೇಮಂತ್ ಹಾಗೂ ಚಿತ್ರಾಗೆ ನಿಶ್ಚಿತಾರ್ಥ ಆಗಿತ್ತು. ಚಿತ್ರೀಕರಣ ಮುಗಿಸಿ ಬುಧವಾರ ಮುಂಜಾನೆ ಸುಮಾರು 2.30 ವೇಳೆಗೆ ಚಿತ್ರಾ ಹೋಟೆಲ್​​ ರೂಮ್​​ಗೆ ಬಂದಿದ್ದಾರೆ. "ಸ್ನಾನಕ್ಕೆ ಹೋಗುವುದಾಗಿ ಹೇಳಿದ ಚಿತ್ರಾ ಬಹಳ ಸಮಯ ಹೊರ ಬರಲಿಲ್ಲ. ಅನುಮಾನ ಬಂದು ಹೋಟೆಲ್ ಸಿಬ್ಬಂದಿಗಳನ್ನು ಕರೆದು ನಕಲಿ ಕೀ ಬಳಸಿ ಹೋಟೆಲ್ ರೂಮ್​​​​​​​​​​​​​​​​​​​​​​ ತೆಗೆದು ನೋಡಿದಾಗ ಚಿತ್ರ ಫ್ಯಾನ್​​​ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು" ಎಂದು ಚಿತ್ರ ಭಾವಿ ಪತಿ ಹೇಮಂತ್ ಪೊಲೀಸರ ಬಳಿ ಮಾಹಿತಿ ನೀಡಿದ್ದಾರೆ. ಚಿತ್ರ ಆತ್ಮಹತ್ಯೆ ವಿಚಾರ ತಿಳಿದ ಅಭಿಮಾನಿಗಳು ಆಘಾತ ವ್ಯಕ್ತಪಡಿಸಿದ್ದಾರೆ. ನಜರತ್​ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಚಿತ್ರಾ ಮೃತದೇಹವನ್ನು ಪೋಸ್ಟ್​​​​​​​​​​​​​​​​​ಮಾರ್ಟಂಗೆ ಕಳಿಸಲಾಗಿದೆ. ಕಾಲಿವುಡ್ ಗಣ್ಯರು ಚಿತ್ರಾ ಸಾವಿಗೆ ಕಂಬನಿ ಮಿಡಿದಿದ್ದಾರೆ.

Last Updated : Dec 9, 2020, 11:19 AM IST

ABOUT THE AUTHOR

...view details