ಕರ್ನಾಟಕ

karnataka

ETV Bharat / sitara

ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ನಟ ವಿಜಯ್ ಗೆ ಅಗ್ರಪಟ್ಟ.. 'ದಳಪತಿ 66' ಚಿತ್ರಕ್ಕೆ ಪಡೆದಿದ್ದೆಷ್ಟು? - ಸೂಪರ್​ ಸ್ಟಾರ್​ ಮಹೇಶ್​ಬಾಬು

ಈ ಚಿತ್ರ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಲಿದೆ. ಆ ಮೂಲಕ ಟಾಲಿವುಡ್‌ಗೂ ವಿಜಯ್ ಪದಾರ್ಪಣೆ ಮಾಡಲಿದ್ದಾರೆ. ವರದಿಗಳ ಪ್ರಕಾರ 'ದಳಪತಿ 66' ಚಿತ್ರಕ್ಕಾಗಿ ನಟ ವಿಜಯ್‌ ಬರೋಬ್ಬರಿ 120 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ..

tamil-actor-vijay-get-highest-salary-in-south-indian-film-industry
ತಮಿಳು ನಟ ಇಳಯದಳಪತಿ ವಿಜಯ್

By

Published : Aug 20, 2021, 7:36 PM IST

ಸೂಪರ್​ ಸ್ಟಾರ್​ ಮಹೇಶ್​ಬಾಬು ಅಭಿನಯದ 'ಮಹರ್ಷಿ' ಚಿತ್ರ ಸೂಪರ್​ ಹಿಟ್​​ ಆದ ನಂತರ ನಿರ್ದೇಶಕ ವಂಶಿ ಪೈಡಿಪಲ್ಲಿ ತಮಿಳು ನಟ ಇಳಯದಳಪತಿ ವಿಜಯ್ ಹೊಸ ಚಿತ್ರ 'ದಳಪತಿ 66' ಚಿತ್ರಕ್ಕೆ ಆ್ಯಕ್ಷನ್-ಕಟ್​ ಹೇಳಲಿದ್ದಾರೆ. ಮಾಹಿತಿ ಪ್ರಕಾರ ಈ ಸಿನಿಮಾಗೆ ವಿಜಯ್​ ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯ್ ಅಭಿನಯದ 66ನೇ ಚಿತ್ರಕ್ಕೆ ವಂಶಿ ನಿರ್ದೇಶನ ಮಾಡಲಿದ್ದಾರೆ. ವಿಜಯ್ ಮತ್ತು ವಂಶಿ ಪೈಡಿಪಲ್ಲಿ ಕಾಂಬಿನೇಶನ್‌ನಲ್ಲಿ ಮೂಡಿ ಬರಲಿರುವ ಇನ್ನೂ ಹೆಸರಿಡದ 'ದಳಪತಿ 66' ಚಿತ್ರಕ್ಕೆ ದಿಲ್ ರಾಜು ಬಂಡವಾಳ ಹಾಕಲಿದ್ದಾರೆ. ಸದ್ಯ 'ಬೀಸ್ಟ್' ಸಿನಿಮಾದ ಚಿತ್ರೀಕರಣದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ.

ಈ ಚಿತ್ರ ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿದ್ಧವಾಗಲಿದೆ. ಆ ಮೂಲಕ ಟಾಲಿವುಡ್‌ಗೂ ವಿಜಯ್ ಪದಾರ್ಪಣೆ ಮಾಡಲಿದ್ದಾರೆ. ವರದಿಗಳ ಪ್ರಕಾರ 'ದಳಪತಿ 66' ಚಿತ್ರಕ್ಕಾಗಿ ನಟ ವಿಜಯ್‌ ಬರೋಬ್ಬರಿ 120 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದ್ದಾರೆ.

ABOUT THE AUTHOR

...view details