ಚೆನ್ನೈ: 'ಕನ್ನ ಲಡ್ಡು ತಿನ್ನ ಆಸೆಯಾ' ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ವೈದ್ಯ ಡಾ. ಸೇತುರಾಮನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
36ನೇ ವಯಸ್ಸಿಗೇ ತಮಿಳು ನಟ-ವೈದ್ಯ ಸೇತುರಾಮನ್ ನಿಧನ - 'ಕನ್ನ ಲಡ್ಡು ತಿನ್ನ ಆಸೆಯಾ' ಸಿನಿಮಾ
ಚರ್ಮರೋಗ ವೈದ್ಯ ಹಾಗೂ ತಮಿಳು ನಟ ಡಾ. ಸೇತುರಾಮನ್ ಹೃದಯಾಘಾತದಿಂದ ಕಳೆದ ರಾತ್ರಿ ಮೃತಪಟ್ಟಿದ್ದಾರೆ.
![36ನೇ ವಯಸ್ಸಿಗೇ ತಮಿಳು ನಟ-ವೈದ್ಯ ಸೇತುರಾಮನ್ ನಿಧನ Tamil actor-doctor Sethuraman dies of cardiac arrest at 36](https://etvbharatimages.akamaized.net/etvbharat/prod-images/768-512-6562370-thumbnail-3x2-megha.jpg)
ಸೇತುರಾಮನ್
ಚೆನ್ನೈನಲ್ಲಿರುವ 'Z ಕ್ಲಿನಿಕ್'ನಲ್ಲಿ ಚರ್ಮರೋಗ ವೈದ್ಯರಾಗಿದ್ದ ಸೇತುರಾಮನ್ (36) ಕಳೆದ ರಾತ್ರಿ ತಮ್ಮ ನಿವಾಸದಲ್ಲೇ ಮೃತಪಟ್ಟಿದ್ದಾರೆ. ಬೆನ್ನುಮೂಳೆಯ ಗಾಯದಿಂದ ಬಳಲುತ್ತಿದ್ದ ಇವರು 2017 ರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೇ ಕಾರಣಕ್ಕೆ ಅವರು ಗಂಭೀರ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಲಾಗ್ತಿದೆ.
2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇವರಿಗೆ ಮಗುವೊಂದಿದೆ. ಇನ್ನು 'ವಾಲಿಬ ರಾಜಾ', 'ಸಕ್ಕ ಪೋಡು ಪೋಡು ರಾಜ' ಮತ್ತು '50/50' ಸಿನಿಮಾಗಳಲ್ಲಿ ಕೂಡ ಸೇತುರಾಮನ್ ನಟಿಸಿದ್ದರು.