ತಮಿಳು ನಟ ಆರ್ಯ ಅಭಿನಯದ 'ಸಾರ್ಪಟ್ಟ' ಸಿನಿಮಾದಲ್ಲಿ ಆರ್ಯ ಲುಕ್ ರಿವೀಲ್ ಆಗಿದೆ. ಪಾ. ರಂಜಿತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಸಿನಿ ಪ್ರೇಕ್ಷಕನ ಮನ ಸೆಳೆಯುತ್ತಿದೆ.
ಆರ್ಯನ ಸಿಕ್ಸ್ ಪ್ಯಾಕ್ ನೋಡಿ ಅಭಿಮಾನಿಗಳು ಫಿದಾ! - tamil actor arya new look
ನಿರ್ದೇಶಕ ರಂಜಿತ್ ಈ ಹಿಂದೆ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು. ಮೊದಲ ಬಾರಿಗೆ ಆರ್ಯಗೆ ನಿರ್ದೇಶನ ಮಾಡುತ್ತಿದ್ದು, ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಮೂಡಿದೆ..
ಸದ್ಯ ರಿವೀಲ್ ಆಗಿರುವ ಲುಕ್ನಲ್ಲಿ ನಟ ಆರ್ಯ ಭರ್ಜರಿ ಮೈಕಟ್ಟು ಹೊಂದಿ ಬಾಕ್ಸರ್ ಆಗಿ ಎಂಟ್ರಿ ಕೊಡೋದಿಕ್ಕೆ ರೆಡಿಯಾಗಿದ್ದಾರೆ. ಆರ್ಯನ ಈ ಲುಕ್ ಅಭಿಮಾನಿಗಳ ನಿದ್ದೆ ಗೆಡಿಸಿದೆ. ಸಾರ್ಪಟ್ಟ ಎಂದರೆ ಎಂಭತ್ತರ ದಶಕದ ಒಂದು ಬಾಕ್ಸಿಂಗ್ ತಂಡವಂತೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಪೋಸ್ಟರ್ನಲ್ಲಿ ಆರ್ಯ ಬಾಕ್ಸಿಂಗ್ ಆಡಲು ನಿಂತಿದ್ದು, ನೆರೆದಿರುವ ಪ್ರೇಕ್ಷಕರು ಅವರನ್ನು ಹುರಿದುಂಬಿಸುತ್ತಿದ್ದಾರೆ. ನಿರ್ದೇಶಕ ರಂಜಿತ್ ಈ ಹಿಂದೆ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದರು. ಮೊದಲ ಬಾರಿಗೆ ಆರ್ಯಗೆ ನಿರ್ದೇಶನ ಮಾಡುತ್ತಿದ್ದು, ಸಿನಿಮಾ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಮೂಡಿದೆ.