ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವ ಬೆನ್ನಲ್ಲೇ ಸೌತ್ ಸಿನಿಮಾ ಇಂಡಸ್ಟ್ರಿಯ ತಾರೆಯರು ನಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಹೊಂದಿದ್ದಾರೆ. ಈ ಮಾತಿಗೆ ಪೂರಕವಾಗಿ ಕನ್ನಡದ ಸ್ಟಾರ್ ನಟರು, ಬೇರೆ ಭಾಷೆಯ ಸ್ಟಾರ್ಗಳ ಸಿನಿಮಾಗೆ ಸಪೋರ್ಟ್ ಮಾಡ್ತಾ ಇದ್ದಾರೆ.
ಇದರ ಜೊತೆಗೆ ಬೇರೆ ಭಾಷೆಯ ನಟರು ಕೂಡ ಕನ್ನಡ ಸಿನಿಮಾಗಳ ಬೆಳವಣಿಗೆಗೆ ಕೈ ಜೋಡಿಸುತ್ತಿದ್ದಾರೆ. ಇದೀಗ ತಮಿಳು ನಟ ಅಜಿತ್ ಕುಮಾರ್ ಅಭಿನಯ ಬಹು ನಿರೀಕ್ಷಿತ ಸಿನಿಮಾ ವಲಿಮೈ, ತಮಿಳು ಅಲ್ಲದೇ, ತೆಲುಗು, ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆ ತಲಾ ಅಜಿತ್ ಕುಮಾರ್ ಸಿನಿಮಾಗೆ, ಕನ್ನಡದ ಹೆಬ್ಬುಲಿ ಕಿಚ್ಚ ಸುದೀಪ್ ಸಾಥ್ ನೀಡಿದ್ದಾರೆ.
ಹೌದು, ಅಜಿತ್ ಅಭಿನಯದ ವಲಿಮೈ ಸಿನಿಮಾದ ಕನ್ನಡ ವರ್ಷನ್ ಟ್ರೈಲರ್ ಅನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಲಾಂಚ್ ಮಾಡುವ ಮೂಲಕ ಅಜಿತ್ ಸಿನಿಮಾಗೆ ಕಿಚ್ಚನ ಸಾಥ್ ಸಿಕ್ಕಿದೆ. ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ನಿರ್ಮಾಣ ಮಾಡಿದ್ದು, ಈ ಚಿತ್ರದ ಟ್ರೈಲರ್ನಲ್ಲಿ ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ಬಿಡುಗಡೆ ಮಾಡಿದ್ರೆ, ಹಿಂದಿಯಲ್ಲಿ ಅಜಯ್ ದೇವಗನ್ ವಲಿಮೈ ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ.