ಕೊರೊನಾಗೆ ವ್ಯಾಕ್ಸಿನ್ ದೊರೆಯುತ್ತದೆ, ಶೀಘ್ರದಲ್ಲೇ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ಕಾಯುತ್ತಿದ್ದವರಿಗೆ ನಿರಾಸೆಯುಂಟಾಗಿದೆ. ಪ್ರತಿದಿನ ಸೋಂಕು ಪ್ರಕರಣಗಳು ಹೆಚ್ಚುತ್ತಿವೆಯೇ ಹೊರತು ಕಡಿಮೆಯಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.
ಈ ವೈರಸ್ ನಮ್ಮನ್ನು ಬಿಡುತ್ತಿಲ್ಲ, ಪ್ರತಿ ಹೆಜ್ಜೆಯಲ್ಲೂ ಜಾಗೃತರಾಗಿರಬೇಕು..ತಮನ್ನಾ ಭಾಟಿಯಾ - Tamannaah back to shooing
ಸದ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದರೆ ಕೊರೊನಾ ನಾಶವಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನಾವು ಬಹಳ ಜಾಗ್ರತೆಯಲ್ಲಿರಬೇಕು. ಮುಂಜಾಗ್ರತೆ ವಹಿಸಿ ಮೊದಲಿನಂತೆ ಕೆಲಸಗಳಲ್ಲಿ ಭಾಗಿಯಾಗಬೇಕು ಎಂದು ಟಾಲಿವುಡ್ ನಟಿ ತಮನ್ನಾ ಭಾಟಿಯಾ ಹೇಳಿದ್ದಾರೆ.
ಈ ನಡುವೆ ಸಿನಿಮಾ ಚಟುವಟಿಕೆಗಳು ಆರಂಭವಾಗಿದ್ದು ಕಲಾವಿದರು ಮತ್ತೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೂಡಾ ಶೂಟಿಂಗ್ ಹಾಜರಾಗಲಿದ್ದಾರೆ. ತಾವು ಮನೆಯಲ್ಲಿ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿರುವ ಫೋಟೋವೊಂದನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ತಮನ್ನಾ "ಕಳೆದ 6 ತಿಂಗಳಿಂದ ವರ್ಕ್ ಫ್ರಮ್ ಹೋಂ ಮಾಡುತ್ತಿದ್ದೇವೆ. ಪರಿಸ್ಥಿತಿ ನೋಡಿದರೆ ಕೊರೊನಾ ನಮ್ಮನ್ನು ಬಿಟ್ಟು ಹೋಗುವ ಲಕ್ಷಣಗಳು ಕಾಣುತ್ತಿಲ್ಲ. ಭಾರೀ ಮುನ್ನೆಚರಿಯಿಂದ ಮತ್ತೆ ನಮ್ಮ ಕೆಲಸವನ್ನು ಆರಂಭಿಸಬೇಕು" ಎಂದು ಬರೆದುಕೊಂಡಿದ್ದಾರೆ.
ತಮನ್ನಾ ಸದ್ಯಕ್ಕೆ ಪ್ರಶಾಂತ್ ವರ್ಮ ನಿರ್ದೇಶನದ 'ದಟ್ ಇಸ್ ಮಹಾಲಕ್ಷ್ಮಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಂಪತ್ ನಂದಿ ನಿರ್ದೇಶನದಲ್ಲಿ ಗೋಪಿಚಂದ್ ಜೊತೆ 'ಸೀಟಿಮಾರೋ' ಎಂಬ ಚಿತ್ರದಲ್ಲಿ ಜ್ವಾಲಾ ರೆಡ್ಡಿ ಎಂಬ ಕೋಚ್ ಪಾತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ. ಇದರೊಂದಿಗೆ ಹಿಂದಿಯ ಶಮಾಸ್ ನವಾಬ್ ಸಿದ್ದಿಖಿ ನಿರ್ದೇಶನದಲ್ಲಿ 'ಬೋಲೆ ಚೂಡಿಯಾ' ಎಂಬ ಚಿತ್ರದಲ್ಲಿ ಮಿಲ್ಕಿ ಬ್ಯೂಟಿ ನಟಿಸಲಿದ್ದಾರೆ.