ತೆಲುಗಿನ ಸ್ಟಾರ್ ನಟರ ಪೈಕಿ ರಾಮ್ ಚರಣ್ ಕೂಡ ಒಬ್ಬರು. ಇವರು ಟಾಲಿವುಡ್ ಸಿನಿ ಇಂಡಸ್ಟ್ರಿಗೆ ಕಾಲಿಟ್ಟು ಇಂದಿಗೆ ಬರೋಬ್ಬರಿ 12 ವರ್ಷವಾಗಿದೆ. ಈ ಬಗ್ಗೆ ರಾಮ್ಚರಣ್ ಸ್ನೇಹ ವಲಯದಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ರಾಮ್ ಚರಣ್ಗೆ ವಿಶ್ ಮಾಡಿರುವ ನಟಿ ತಮನ್ನ ಭಾಟಿಯಾ, ಸಿನಿಮಾ ರಂಗದಲ್ಲಿ 12 ವರ್ಷ ಪೂರೈಸಿದ ನಿನಗೆ ಶುಭಾಶಯಗಳು. ನಿಮ್ಮ ಜೀವನದ ಹಾದಿಯಲ್ಲಿ ಯಾವಾಗಲೂ ಆನಂದ, ಸಂತೋಷ ಸಿಗಲಿ ಎಂದು ಆಶಿಸುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಕೇಕ್ ಕಟ್ ಮಾಡುತ್ತಿರುವ ರಾಮ್ಚರಣ್ ಫೋಟೋ ಒಂದನ್ನು ಶೇರ್ ಮಾಡಿರುವ ತಮನ್ನಾ, ಇದರಲ್ಲಿ ರಾಮ್ಚರಣ್ ಮಡದಿ ಉಪಾಸನ ಕೂಡ ಇದ್ದಾರೆ.