ಕರ್ನಾಟಕ

karnataka

ETV Bharat / sitara

ಲಂಡನ್​ ರಾಯಲ್ ಆಲ್ಬರ್ಟ್ ಹಾಲ್​​​ನಲ್ಲಿ 'ಬಾಹುಬಲಿ' ವಿಶೇಷ ಪ್ರದರ್ಶನಕ್ಕೆ ತಮನ್ನಾ ಗೈರು...? - ಲಂಡನ್ ಬಾಹುಬಲಿ ವಿಶೇಷ ಪ್ರದರ್ಶನಕ್ಕೆ ತಮನ್ನಾ ಗೈರು

'ಬಾಹುಬಲಿ' ಚಿತ್ರದಲ್ಲಿ ಅನುಷ್ಕಾ ಪಾತ್ರಕ್ಕಿಂತ ತಮನ್ನಾ ಪಾತ್ರಕ್ಕೆ ಹೆಚ್ಚು ಪ್ರಾಧ್ಯಾನತೆ ಇದ್ದರೂ ಇಂತಹ ದೊಡ್ಡ ಪ್ರದರ್ಶನಕ್ಕೆ ಅವರು ಗೈರಾಗಿರುವುದಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಅಥವಾ ವಿಶೇಷ ಶೋ ಆರಂಭಕ್ಕೂ ಮುನ್ನ ತಮನ್ನಾ ಅಲ್ಲಿ ಹಾಜರಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.

ಲಂಡನಿನಲ್ಲಿ 'ಬಾಹುಬಲಿ' ವಿಶೇಷ ಪ್ರದರ್ಶನ

By

Published : Oct 19, 2019, 11:54 PM IST

ಎಸ್​.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾ ತೆಲುಗು ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತರಕ್ಕೆ ಕೊಂಡೊಯ್ದ ಸಿನಿಮಾ. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ, ತಮನ್ನಾ ಭಾಟಿಯಾ, ರಮ್ಯಕೃಷ್ಣ ಹಾಗೂ ಇನ್ನಿತರರು ನಟಿಸಿದ ಈ ಸಿನಿಮಾ ಟಾಲಿವುಡ್ ಚಿತ್ರರಂಗದ ಇತಿಹಾಸದಲ್ಲೇ ಬಹಳ ದೊಡ್ಡ ಸಿನಿಮಾ.

'ಬಾಹುಬಲಿ'

ಈ ಚಿತ್ರತಂಡಕ್ಕೆ ಮತ್ತೊಂದು ಸಾರಿ ಒಂದೇ ವೇದಿಕೆ ಮೇಲೆ ಭೇಟಿ ಮಾಡುವ ಅವಕಾಶ ಒದಗಿಬಂದಿದೆ. ಇಂದು ರಾತ್ರಿ ಲಂಡನಿನ ಖ್ಯಾತ ರಾಯಲ್ ಆಲ್ಬರ್ಟ್ ಹಾಲ್​​ನಲ್ಲಿ ಈ ಚಿತ್ರದ ವಿಶೇಷ ಪ್ರದರ್ಶನ ಜರುಗುತ್ತಿದೆ. ನಂತರ ಸಂಗೀತ ನಿರ್ದೇಶಕ ಕೀರವಾಣಿ ಅವರ ಸಂಗೀತ ಕಾರ್ಯಕ್ರಮ ಕೂಡಾ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಹಾಜರಾಗಲು ಪ್ರಭಾಸ್, ರಾಣಾ , ಅನುಷ್ಕಾ, ರಾಜಮೌಳಿ ಹಾಗೂ ಇನ್ನಿತರರು ಲಂಡನ್ ತೆರಳಿದ್ದಾರೆ. ಇವರೆಲ್ಲರೂ ಒಟ್ಟಾಗಿ ಸೇರಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಈ ಪೋಟೋದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಮಾತ್ರ ಮಿಸ್ ಆಗಿದ್ದಾರೆ. 'ಬಾಹುಬಲಿ' ಚಿತ್ರದಲ್ಲಿ ಅನುಷ್ಕಾ ಪಾತ್ರಕ್ಕಿಂತ ತಮನ್ನಾ ಪಾತ್ರಕ್ಕೆ ಹೆಚ್ಚು ಪ್ರಾಧ್ಯಾನತೆ ಇದ್ದರೂ ಇಂತಹ ದೊಡ್ಡ ಪ್ರದರ್ಶನಕ್ಕೆ ಅವರು ಗೈರಾಗಿರುವುದಕ್ಕೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಅಥವಾ ವಿಶೇಷ ಶೋ ಆರಂಭಕ್ಕೂ ಮುನ್ನ ತಮನ್ನಾ ಅಲ್ಲಿ ಹಾಜರಾಗುತ್ತಾರಾ ಎಂಬುದನ್ನು ಕಾದು ನೋಡಬೇಕು.

'ಬಾಹುಬಲಿ' ಚಿತ್ರದಲ್ಲಿ ತಮನ್ನಾ

For All Latest Updates

TAGGED:

ABOUT THE AUTHOR

...view details