ಇಷ್ಟು ದಿನ ಅನಾಮಧೇಯ ಇನ್ಸ್ಟಾಗ್ರಾಮ್ ಬಳಸುತ್ತಿದ್ದ ಬಾಲಿವುಡ್ ಬೆಡಗಿ ಕರೀನಾ ಕಪೂರ್ ಇದೀಗ ತಮ್ಮದೇ ಆದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಇವರಿಗೆ ನಿನ್ನೆಯಷ್ಟೇ ಬ್ಲೂ ಮಾರ್ಕ್ ಸಿಕ್ಕಿದ್ದು, ಸದ್ಯ 1 ಮಿಲಿಯನ್ಗಿಂತಲೂ ಅಧಿಕ ಫಾಲೋವರ್ಸ್ ಇದ್ದಾರೆ.
ಕರೀನಾ ತಮ್ಮ ಇನ್ಸ್ಟಾ ಖಾತೆಗೆ ಹೊಸ ಫೋಟೋ ಅಪ್ಲೋಡ್ ಮಾಡಿದ್ದು, ಆ ಚಿತ್ರಕ್ಕೆ ಕಮೆಂಟ್ ಮತ್ತು ಲೈಕ್ಗಳ ಸುರಿಮಳೆಯೇ ಆಗುತ್ತಿದೆ. ಹೌದು, ಮಗ ತೈಮೂರ್ ಕರೀನಾ ಹೆಗಲ ಮೇಲೆ ಮಲಗಿ ವಿಶ್ರಾಂತಿಸುತ್ತಿರುವ ಫೋಟೋವನ್ನು ಅವರು ಅಪ್ಲೋಡ್ ಮಾಡಿದ್ದಾರೆ. ಈ ಫೋಟೋವನ್ನು ಅವಿನಾಶ್ ಗೌರೀಕರ್ ಸಿನಿಮಾವೊಂದರ ಚಿತ್ರೀಕರಣ ವೇಳೆ ಕ್ಯಾಪ್ಚರ್ ಮಾಡಿದ್ದಾರೆ.