'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ನಂತರ ತಬಲಾ ನಾಣಿ ಹಾಗೂ ಅಪೂರ್ವ ಜೋಡಿ ಇದೀಗ ಮತ್ತೆ ಒಂದಾಗುತ್ತಿದ್ದಾರೆ. ಈ ಜೋಡಿ ಒಟ್ಟಿಗೆ ಸೇರಿ ಕ್ರಿಟಿಕಲ್ ಕೀರ್ತನೆಗಳನ್ನು ಹಾಡಲು ಹೊರಟಿದ್ದಾರೆ. ಇದೇನಪ್ಪಾ ಇಬ್ಬರೂ ಸಂಗೀತ ಕಛೇರಿ ನೀಡುತ್ತಿದ್ದಾರಾ ಎಂದು ಆಶ್ಚರ್ಯ ಪಡಬೇಡಿ. ಈ ಜೋಡಿ 'ಕ್ರಿಟಿಕಲ್ ಕೀರ್ತನೆಗಳು' ಎಂಬ ಸಿನಿಮಾದಲ್ಲಿ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.
'ಕ್ರಿಟಿಕಲ್ ಕೀರ್ತನೆಗಳು' ಹಾಡಲು ಹೊರಟ ತಬಲಾ ನಾಣಿ, ಅಪೂರ್ವ ಜೋಡಿ - ಕ್ರಿಟಿಕಲ್ ಕೀರ್ತನೆಗಳು ಚಿತ್ರದಲ್ಲಿ ಅಪೂರ್ವ ತಬಲಾನಾಣಿ ನಟನೆ
ಎಲ್. ಕುಮಾರ್ ನಿರ್ದೇಶನದ 'ಕ್ರಿಟಿಕಲ್ ಕೀರ್ತನೆಗಳು' ಸಿನಿಮಾದಲ್ಲಿ ತಬಲಾ ನಾಣಿ ಹಾಗೂ ಅಪೂರ್ವ ಮತ್ತೆ ಜೊತೆಯಾಗಿ ನಟಿಸಿದ್ದಾರೆ. ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣದ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಕಂಠೀರವ ಸ್ಟುಡಿಯೋ ಕೋರ್ಟ್ ಹಾಲ್ನಲ್ಲಿ ಹಾಕಲಾಗಿರುವ ಸೆಟ್ನಲ್ಲಿ ಚಿತ್ರದ ಕೆಲವೊಂದು ದೃಶ್ಯಗಳನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು.
!['ಕ್ರಿಟಿಕಲ್ ಕೀರ್ತನೆಗಳು' ಹಾಡಲು ಹೊರಟ ತಬಲಾ ನಾಣಿ, ಅಪೂರ್ವ ಜೋಡಿ Critical keertanegalu](https://etvbharatimages.akamaized.net/etvbharat/prod-images/768-512-5755550-thumbnail-3x2-tabalanai.jpg)
ಕೇಸರಿ ಫಿಲ್ಮ್ ಕ್ಯಾಪ್ಚರ್ ನಿರ್ಮಾಣದ ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದೆ. ಕಂಠೀರವ ಸ್ಟುಡಿಯೋ ಕೋರ್ಟ್ ಹಾಲ್ನಲ್ಲಿ ಹಾಕಲಾಗಿರುವ ಸೆಟ್ನಲ್ಲಿ ಚಿತ್ರದ ಕೆಲವೊಂದು ದೃಶ್ಯಗಳನ್ನು ಇತ್ತೀಚೆಗೆ ಚಿತ್ರೀಕರಿಸಲಾಯಿತು. ಚಿತ್ರಕ್ಕೆ ಎಲ್. ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಸಿನಿಮಾ ನಿರ್ದೇಶಿಸಿದ್ದು ಕೂಡಾ ಎಲ್. ಕುಮಾರ್ ಅವರೇ. ಶಿವಸೇನ ಮತ್ತು ಶಿವಶಂಕರ್ ಛಾಯಾಗ್ರಹಣ, ವೀರ ಸಮರ್ಥ ಸಂಗೀತ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಬೆಂಗಳೂರು, ಕುಂದಾಪುರ, ಮಂಡ್ಯ, ಬೆಳಗಾವಿಯಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಐಪಿಎಲ್ ಬೆಟ್ಟಿಂಗ್ ವಿಚಾರವನ್ನು ಈ ಸಿನಿಮಾದಲ್ಲಿ ಹಾಸ್ಯಮಯವಾಗಿ ಹೇಳಲು ಪ್ರಯತ್ನಿಸಲಾಗಿದೆ. ತಬಲಾ ನಾಣಿ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ತರಂಗ ವಿಶ್ವ, ಅಪೂರ್ವ, ಅಪೂರ್ವ ಭಾರದ್ವಾಜ್, ಅರುಣಾ ಬಾಲರಾಜ್ ಹಾಗೂ ಇನ್ನಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ.