ಕರ್ನಾಟಕ

karnataka

ETV Bharat / sitara

ತಾಪ್ಸಿ ಪನ್ನು ಅಭಿನಯದ 'ಲೂಪ್ ಲಪೇಟಾ' ಟ್ರೇಲರ್ ಬಿಡುಗಡೆ - ತಹಿರ್​ ರಾಜ್ ಭಾಸಿನ್

ತಾಪ್ಸಿ ಪನ್ನು ಮತ್ತು ತಹಿರ್ ರಾಜ್ ಭಾಸಿನ್ ಅವರ ಕಾಮಿಡಿ-ಥ್ರಿಲ್ಲರ್ 'ಲೂಪ್ ಲಪೇಟಾ' ಸಿನಿಮಾದ ಟ್ರೇಲರ್ ಗುರುವಾರ ಬಿಡುಗಡೆಯಾಗಿದೆ.

ಲೂಪ್ ಲಪೇಟಾ
ಲೂಪ್ ಲಪೇಟಾ

By

Published : Jan 14, 2022, 6:45 AM IST

ತಾಪ್ಸಿ ಪನ್ನು ಹಾಗೂ ತಹಿರ್​ ರಾಜ್ ಭಾಸಿನ್ ಅಭಿನಯದ 'ಲೂಪ್ ಲಪೇಟಾ' ಸಿನಿಮಾದ ಟ್ರೇಲರ್​ ಗುರುವಾರ ಬಿಡುಗಡೆಯಾಗಿದ್ದು ಭಾರಿ ರೋಚಕವಾಗಿದೆ.

ತೆಲುಗು, ತಮಿಳು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಇರುವ ತಾಪ್ಸಿ ತಮ್ಮ ಚಿತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ. 'ಲೂಪ್ ಲಪೇಟಾ' ಕೂಡಾ ಬಹುನಿರೀಕ್ಷಿತ ಚಿತ್ರವಾಗಿದ್ದು, ಈ ಸಿನಿಮಾ ಕೂಡಾ ಅಭಿಮಾನಿಗಳಿಗೆ ಇಷ್ಟವಾಗುವುದರಲ್ಲಿ ನೋ ಡೌಟ್.

ಕಾಮಿಡಿ - ಥ್ರಿಲ್ಲರ್ ಮೂವಿ 'ಲೂಪ್ ಲಪೇಟಾ' 1998ರಲ್ಲಿ ಬಿಡುಗಡೆಯಾದ 'ರನ್ ಲೋಲಾ ರನ್'​​​​​​​​​ ಜರ್ಮನ್ ಚಿತ್ರದ ರೀಮೇಕ್ ಆಗಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ಈ ಫಿಲ್ಮ್ ಬಿಡುಗಡೆಯಾಗಲಿದೆ. ಇದು ಪ್ರೇಮ ಕಥೆ ಒಳಗೊಂಡಿದ್ದು, ತನ್ನ ಗೆಳೆಯನನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿರುವ ಹುಡುಗಿಯೊಬ್ಬಳ ಕಥೆ ಹೇಳುತ್ತದೆ. ನಿನ್ನೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಭಾರತದ ನೇಟಿವಿಟಿಗೆ ತಕ್ಕಂತೆ 'ಲೂಪ್ ಲಪೇಟಾ' ಚಿತ್ರೀಕರಣ ಮಾಡಲಾಗಿದ್ದು, 'ಹಸೀನಾ ದಿಲ್​ರುಬಾ', ' ರಶ್ಮಿ ರಾಕೆಟ್', 'ಪಿಂಕ್'​, 'ತಪ್ಪಡ್'​ ಸೇರಿದಂತೆ ಅನೇಕ ಹಿಟ್​ ಸಿನಿಮಾಗಳಲ್ಲಿ ತಾಪ್ಸಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ABOUT THE AUTHOR

...view details