ಕರ್ನಾಟಕ

karnataka

ETV Bharat / sitara

ಶಾಲಾ ದಿನಗಳ ಫೋಟೋ ಶೇರ್​ ಮಾಡಿದ ತಾಪ್ಸಿ ಪನ್ನು; ಇದರ ಬಗ್ಗೆ ಅವರು ಹೇಳಿದ್ದು ಹೀಗೆ..

ನಾನು ಶಾಲಾ ದಿನಗಳಲ್ಲಿ ಒಂದು ದಿನ ವಿದ್ಯಾರ್ಥಿನಿ ನಾಯಕಿಯಾಗಬೇಕು ಎಂದುಕೊಂಡಿದ್ದೆ. ಅಂತಹ ದಿನಗಳಲ್ಲಿ ಈ ದಿನ ತುಂಬಾ ಪ್ರಮುಖವಾದದ್ದಾಗಿದೆ. ನಾನು ಅಂದುಕೊಂಡದ್ದು ನಡೆದ ಅಪರೂಪದ ದಿನ ಇದು. ಇದುವೇ ನಾನು ವಿದ್ಯಾರ್ಥಿನಿ ನಾಯಕಿಯಾಗಿ ಪ್ರತಿಜ್ಞೆ ಸ್ವೀಕರಿಸಿದ ದಿನ ಎಂದು ಹೇಳಿದ್ದಾರೆ.

Taapsee Pannu
ತಾಪ್ಸಿ ಪನ್ನು

By

Published : Apr 7, 2020, 5:00 PM IST

ನವದೆಹಲಿ :ತನ್ನ ಶಾಲಾ ದಿನಗಳನ್ನು ನೆನಪಿಸುತ್ತಾ, ಬಾಲಿವುಡ್​ ನಟಿ ತಾಪ್ಸಿ ಪನ್ನು ಮಂಗಳವಾರ ಹಳೆ ನೆನಪಿನ ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿನಿ ನಾಯಕಿಯಾಗಿ ಪ್ರತಿಜ್ಞೆ ಸ್ವೀಕರಿಸುತ್ತಿರುವ ಚಿತ್ರವೊಂದನ್ನು ಶೇರ್​ ಮಾಡಿದ್ದಾರೆ.

32 ವರ್ಷದ ನಟಿ ತಾಪ್ಸಿ 21 ದಿನಗಳ ಲಾಕ್‌ಡೌನ್ ಸಮಯದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಸರಣಿ ಚಿತ್ರಗಳನ್ನು ಶೇರ್​ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ಸುಮಧುರ ನೆನಪೊಂದನ್ನು ಹಂಚಿರುವ ಅವರು, ಶಾಲೆಯ ಸಮವಸ್ತ್ರ ಧರಿಸಿ ಶಾಲೆಯ ವಿದ್ಯಾರ್ಥಿನಿ ನಾಯಕಿಯಾಗಿ ಪ್ರತಿಜ್ಞೆ ಸ್ವೀಕರಿಸುವ ಫೋಟೋವನ್ನು ಶೇರ್‌ ಮಾಡಿದ್ದಾರೆ. ಈ ಫೋಟೋದಲ್ಲಿ ಅವರ ಪಕ್ಕದಲ್ಲೇ ಅವರ ಅಪ್ಪ-ಅಮ್ಮ ಕೂಡಾ ನಿಂತಿರೋದು ವಿಶೇಷ.

ಫೋಟೋ ಬಗ್ಗೆ ಬರೆದಿರುವ ತಾಪ್ಸಿ, ಈ ಚಿತ್ರವು ನನ್ನನ್ನು ಸ್ವಲ್ಪ ಹೆಮ್ಮೆ ಮತ್ತು ಸ್ವಲ್ಪ ಮುಜುಗರಕ್ಕೀಡು ಮಾಡುತ್ತದೆ. ನಾನು ಶಾಲಾ ದಿನಗಳಲ್ಲಿ ಒಂದು ದಿನ ವಿದ್ಯಾರ್ಥಿನಿ ನಾಯಕಿಯಾಗಬೇಕು ಎಂದುಕೊಂಡಿದ್ದೆ. ಅಂತಹ ದಿನಗಳಲ್ಲಿ ಈ ದಿನ ತುಂಬಾ ಪ್ರಮುಖವಾದದ್ದಾಗಿದೆ. ನಾನು ಅಂದುಕೊಂಡದ್ದು ನಡೆದ ಅಪರೂಪದ ದಿನ ಇದು. ಇದುವೇ ನಾನು ವಿದ್ಯಾರ್ಥಿನಿ ನಾಯಕಿಯಾಗಿ ಪ್ರತಿಜ್ಞೆ ಸ್ವೀಕರಿಸಿದ ದಿನ ಎಂದು ಹೇಳಿದ್ದಾರೆ.

ಫೋಟೋ ಪೋಸ್ಟ್ ಮಾಡಿದ ಒಂದು ಗಂಟೆಯೊಳಗೆ ಈ ಫೋಟೋಗೆ 1.5 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಕಾಮೆಂಟ್‌ಗಳು ಬಂದಿವೆ.

ABOUT THE AUTHOR

...view details