ಬಹುಭಾಷಾ ನಟಿ ತಾಪ್ಸಿ ಪನ್ನು, ರಶ್ಮಿ ರಾಕೆಟ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ. ತಾವು ಹೆಲ್ಮೆಟ್ ಹಾಕದೆ ಬೈಕ್ ಓಡಿಸುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾಪ್ಸಿ ಹಂಚಿಕೊಂಡಿದ್ದಾರೆ.
ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ದಂಡ ಕಟ್ಟಿದ ನಟಿ - ತಾಪ್ಸಿ ಪನ್ನು ಸುದ್ದಿ
ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿದ ಕಾರಣ ದಂಡ ವಿಧಿಸಿದ್ದೇನೆ ಎಂದು ನಟಿ ತಾಪ್ಸಿ ಪನ್ನು ಹೇಳಿಕೊಂಡಿದ್ದಾರೆ..
ಹೆಲ್ಮೆಟ್ ಧರಿಸದೇ ಬೈಕ್ ಓಡಿಸಿ ದಂಡ ಕಟ್ಟಿದ ನಟಿ
ಈ ಫೋಟೋ ಶೇರ್ ಮಾಡಿರುವ ನಟಿ, 'ಈ ಫೋಟೋ ದಂಡ ಕಟ್ಟಿರುವುದಕ್ಕಿಂತ ಮುಂಚೆ ತೆಗೆದಿದ್ದು' ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ನಟಿಯನ್ನು ತರಹೇವಾರಿಯಾಗಿ ಕಾಲೆಳೆಯುತ್ತಿದ್ದಾರೆ.
ತಾಪ್ಸಿ ಪನ್ನು ಇದೇ ವರ್ಷ ತೆರೆಕಂಡ ತಪ್ಪಡ್ ಚಿತ್ರದಲ್ಲಿ ಕೊನೆಯದಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಅದಾದ ಮೇಲೆ ಮತ್ತೆ ಯಾವ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಇದೀಗ ರಶ್ಮಿ ರಾಕೆಟ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಲ್ಲದೆ ರಾಣಿ ಕಶ್ಯಪ್ ಆ್ಯಕ್ಷನ್-ಕಟ್ ಹೇಳುತ್ತಿರುವ 'ಹಸೀನ್ ದಿಲ್‌ರುಬಾ' ಚಿತ್ರದಲ್ಲಿಯೂ ಬಣ್ಣ ಹಚ್ಚುತ್ತಿದ್ದಾರೆ.