ತೆಲುಗಿನ ಸೂಪರ್ಸ್ಟಾರ್ ಚಿರಂಜೀವಿ ನಟಿಸುತ್ತಿರುವ 151ನೇ ಸಿನಿಮಾ ಸೈರಾ. ಹೌದು, ಈ ಸಿನಿಮಾ ಈಗಾಗಲೇ ಎಲ್ಲಾ ಕಡೆ ಸಖತ್ ಸುದ್ದಿಯಲ್ಲಿದ್ದು, ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಸುದೀಪ್, ಬಾಲಿವುಡ್ನ ಅಮಿತಾಬ್ ಬಚ್ಚನ್, ನಯನ ತಾರಾ, ವಿಜಯ್ ಸೇತುಪತಿ ಸೇರಿದಂತೆ ಬಹು ತಾರಾಗಣವೇ ಈ ಸಿನಿಮಾದಲ್ಲಿ ಇದೆ.
ಸೈರಾ ಸಿನಿಮಾ ಪ್ರೀ ರಿಲೀಸ್ ಪ್ರೋಗ್ರಾಂ ಯಾವಾಗ ಗೊತ್ತಾ? - ಸೈರಾ ಸಿನಿಮಾ ಪ್ರಿ ರಿಲೀಸ್ ಈವೆಂಟ್
ಸೈರಾ ಚಿತ್ರ ತಂಡ ಇದೀಗ ಮತ್ತೊಂದು ಸುದ್ದಿಯನ್ನು ನೀಡಿದ್ದು, ಇದೇ ತಿಂಗಳ ಅಂದ್ರೆ ಸೆ. 18ರಂದು ಪ್ರೀ ರಿಲೀಸ್ ಪ್ರೋಗ್ರಾಂ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಹೈದರಾಬಾದ್ನ ಎಲ್.ಬಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದ್ದು, ಅದೇ ದಿನವೇ ಸಿನಿಮಾದ ಟ್ರೈಲರ್ ಕೂಡ ಲಾಂಚ್ ಮಾಡಲಾಗುತ್ತಿದೆ.
ಸೈರಾ ಚಿತ್ರತಂಡ ಇದೀಗ ಮತ್ತೊಂದು ಸುದ್ದಿಯನ್ನು ನೀಡಿದ್ದು, ಇದೇ ತಿಂಗಳ ಅಂದ್ರೆ ಸೆ. 18ರಂದು ಪ್ರೀ ರಿಲೀಸ್ ಪ್ರೋಗ್ರಾಂ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವನ್ನು ಹೈದರಾಬಾದ್ನ ಎಲ್.ಬಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದ್ದು, ಅದೇ ದಿನವೇ ಸಿನಿಮಾದ ಟ್ರೈಲರ್ ಕೂಡ ಲಾಂಚ್ ಮಾಡಲಾಗುತ್ತಿದೆ.
ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಇನ್ನು ಈ ಸೈರಾ ಸಿನಿಮಾವನ್ನು ಅ. 2ರಂದು ತೆರೆಯ ಮೇಲೆ ತರಲು ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ಸೈರಾಗೆ ಕಾಯುತ್ತಿದ್ದಾರೆ.