'ಸೈರಾ ನರಸಿಂಹ ರೆಡ್ಡಿ' ವಿಶ್ವದಾದ್ಯಂತ ನಿನ್ನೆ (ಅ.2) ತೆರೆ ಕಂಡಿದ್ದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 82 ಕೋಟಿ ರೂ ಬಾಚಿಕೊಂಡಿದ್ದು, ಕರ್ನಾಟಕದಲ್ಲೂ ಭಾರಿ ಪ್ರದರ್ಶನ ಕಂಡಿದೆ.
ಸಿನಿಮಾ ಆರ್ಥಿಕ ಸಮೀಕ್ಷೆ ತಜ್ಞ ಗಿರೀಶ್ ಜೋಹರ್ ಈ ಬಗ್ಗೆ ಮಾಹಿತಿ ನೀಡಿದ್ದು, ಮೊದಲ ದಿನ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 53 ಕೋಟಿ ರೂ, ಕರ್ನಾಟಕದಲ್ಲಿ 11 ಕೋಟಿ ರೂ, ತಮಿಳುನಾಡು 2 ಕೋಟಿ ರೂ ಹಾಗೂ ವಿದೇಶಗಳಲ್ಲಿ 16 ಕೋಟಿ ರೂ ಸೇರಿ ಒಟ್ಟು 82 ಕೋಟಿ ರೂ ಗಳಿಕೆಯಾಗಿದೆ ಎಂದು ತಿಳಿಸಿದ್ರು.