ಕರ್ನಾಟಕ

karnataka

ETV Bharat / sitara

'ಸೈ ರಾ ನರಸಿಂಹರೆಡ್ಡಿ' ಮೇಕಿಂಗ್ ವಿಡಿಯೋ ರಿಲೀಸ್​​...ಮೈ ನವಿರೇಳಿಸಲಿದೆ ಅದ್ದೂರಿ ಸಾಹಸ ದೃಶ್ಯಗಳು - ಅಮಿತಾಬ್ ಬಚ್ಚನ್

ಕೊನಿಡೇಲ ಪ್ರೊಡಕ್ಷನ್ ಬ್ಯಾನರ್ ಅಡಿ ರಾಮ್​​​ಚರಣ್ ತೇಜ ನಿರ್ಮಿಸಿರುವ 'ಸೈ ರಾ ನರಸಿಂಹರೆಡ್ಡಿ' ಸಿನಿಮಾದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಇದೇ ತಿಂಗಳ 20 ರಂದು ತೆಲುಗು, ಕನ್ನಡ, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಲಿದೆ.

'ಸೈ ರಾ ನರಸಿಂಹರೆಡ್ಡಿ'

By

Published : Aug 14, 2019, 7:03 PM IST

ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151 ನೇ ಸಿನಿಮಾ 'ಸೈ ರಾ ನರಸಿಂಹರೆಡ್ಡಿ' ಸಿನಿಮಾ ಶೂಟಿಂಗ್ ಮುಗಿಸಿ ಚಿತ್ರ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಸ್ವಾತಂತ್ಯ್ರ ಹೋರಾಟಗಾರ ಉಯ್ಯಾಲವಾಡ ನರಸಿಂಹ ರೆಡ್ಡಿ ಜೀವನ ಚರಿತ್ರೆ ಆಧಾರಿತ ಈ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ವಿಡಿಯೋನಲ್ಲಿ ಅದ್ದೂರಿ ಸೆಟ್​​​​ಗಳನ್ನು ನೋಡಬಹುದಾಗಿದೆ. ಅದ್ದೂರಿ ಆ್ಯಕ್ಷನ್ ದೃಶ್ಯಗಳು, ಅಮಿತಾಬ್ ಬಚ್ಚನ್​, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಯನತಾರಾ, ತಮನ್ನಾ, ಜಗಪತಿ ಬಾಬು, ರವಿಕಿಶನ್, ನಿಹಾರಿಹಾ ಹಾಗೂ ಇನ್ನಿತರರ ಆ್ಯಕ್ಟಿಂಗ್, ಸ್ವಾತಂತ್ಯ್ರ ಕಾಲದ ವಸ್ತುಗಳು ಹಾಗೂ ಇನ್ನಿತರ ದೃಶ್ಯಗಳು ಈ ಮೇಕಿಂಗ್​​ ವಿಡಿಯೋನಲ್ಲಿದೆ. ಚಿತ್ರದ ಪೋಸ್ಟರ್​​​ಗಳು​​​​ ಭಾರೀ ಕುತೂಹಲ ಕೆರಳಿಸಿದ್ದು ಇದೀಗ ಈ ಮೇಕಿಂಗ್ ವಿಡಿಯೋ ಕೂಡಾ ಚಿರು ಅಭಿಮಾನಿಗಳಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸಿದೆ.

ಕೊನಿಡೇಲ ಪ್ರೊಡಕ್ಷನ್ ಬ್ಯಾನರ್ ಅಡಿ ರಾಮ್​​ಚರಣ್ ತೇಜ ನಿರ್ಮಾಣದ ಈ ಸಿನಿಮಾವನ್ನು ಸುರೇಂದರ್ ರೆಡ್ಡಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ರತ್ನವೇಲು ಛಾಯಾಗ್ರಹಣ, ರಾಮ್​​​-ಲಕ್ಷ್ಮಣ್​, ಗ್ರೆಗ್ ಪೊವೆಲ್​ ಹಾಗೂ ಲೀ ವೈಟ್ಕೆರ್​​ ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದಾರೆ. ನೀವು ಇದಕ್ಕಿಂತ ಮುನ್ನ ಯಾವ ಸಿನಿಮಾದಲ್ಲೂ ಇಂತಹ ಆ್ಯಕ್ಷನ್ ದೃಶ್ಯಗಳನ್ನು ನೋಡಿರಲು ಸಾಧ್ಯವೇ ಇಲ್ಲ ಎಂದು ಸಾಹಸ ನಿರ್ದೇಶಕ ಲೀ ವೈಟ್ಕೆರ್ ಹೇಳಿದ್ದಾರೆ. ಇದೇ ತಿಂಗಳ 20 ರಂದು ಚಿತ್ರದ ಟೀಸರ್ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಹೇಳಿದೆ. ಸಿನಿಮಾ ತೆಲುಗು, ಹಿಂದಿ, ತಮಿಳು, ಕನ್ನಡ ಹಾಗೂ ಮಲಯಾಳಂ ಸೇರಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ABOUT THE AUTHOR

...view details