ಇದೇ ಮೊದಲ ಬಾರಿಗೆ ಕಿರುತೆರೆ ನಟಿ ಹಾಗೂ ಮಜಾಟಾಕಿಸ್ನಲ್ಲಿ ರಾಣಿ ಎಂದೇ ಖ್ಯಾತರಾದ ಶ್ವೇತಾ ಚಂಗಪ್ಪ ತಮ್ಮ ಮುದ್ದು ಮಗನ ಫೋಟೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಂಚಿಕೊಂಡಿದ್ದಾರೆ.
ಶ್ವೇತಾ ಶನಿವಾರ ಮಗುವನ್ನು ಹಿಡಿದುಕೊಂಡಿದ್ದ ಫೋಟೋ ಶೇರ್ ಮಾಡಿದ್ದರು. ನಂತರ ಭಾನುವಾರ ಕೊಡಗಿನ ಸಾಂಪ್ರದಾಯಿಕ ಉಡುಪಿನೊಂದಿಗೆ ರಾರಾಜಿಸುತ್ತಿರುವ ಮಗುವಿನ ಫೋಟೋವನ್ನು ಹಾಕಿದ್ದಾರೆ.
ಕಳೆದ ಹದಿನೈದು ವರ್ಷದ ಹಿಂದೆ ಇದೇ ದಿನ ತಾವು ಕೂಡ ಕ್ಯಾಮೆರಾ ಮೂಲಕ ಪರಿಚಯವಾಗಿದ್ದೆ. ಅದರ ನೆನಪಿನಾರ್ಥ ನನ್ನ ಮಗುವನ್ನು ಕೂಡ ಈ ಪ್ರಪಂಚಕ್ಕೆ ಈ ದಿನದಂದೆ ಪರಿಚಯಿಸುತ್ತಿದ್ದೀನಿ. ಜಿಯ್ಯಾನ್ ಅಯ್ಯಪ್ಪ ಎಂದು ಮಗುವಿನ ಹೆಸರನ್ನು ಕೂಡ ಬಹಿರಂಗಪಡಿಸಿದ್ದಾರೆ.