ಕರ್ನಾಟಕ

karnataka

ETV Bharat / sitara

ಹರೀಶ್​ ರಾಜ್​ ಗೆ ಆಲ್​ ದಿ ಬೆಸ್ಟ್​ ಹೇಳಿದ ಕನ್ನಡ ಕಿರುತೆರೆ ನಟಿ - ಹರೀಶ್​ ರಾಜ್​

ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿರುವ ಕಿರುತೆರೆ ನಟಿ ಸ್ವಪ್ನಾ ದೀಕ್ಷಿತ್​​, ನಾನು ಹರೀಶ್​ ರಾಜ್​ಗೆ ವೋಟ್​ ಮಾಡುತ್ತೇನೆ. ಬಿಗ್​ ಬಾಸ್​ ನೋಡುವ ಎಲ್ಲರೂ ಹರೀಶ್​ ರಾಜ್​ಗೆ ವೋಟ್​ ಮಾಡಿ ಎಂದು ಮನವಿ ಮಾಡಿದ್ದಾರೆ.

swapna deekshit say all the best to harish  raj
ಬಿಗ್​ ಬಾಸ್​​ ಸ್ಪರ್ಧೆಯಲ್ಲಿ ಹರೀಶ್​ ರಾಜ್​ನನ್ನು ಗೆಲ್ಲಿ ಎಂದು ಮನವಿ ಮಾಡಿದ ನಟಿ!

By

Published : Jan 23, 2020, 6:24 PM IST

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 7 ಮುಂದಿನ ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಕಳೆದ ವಾರ ಕಿಶನ್ ಹಾಗೂ ಚಂದನ್ ಆಚಾರ್ ಮನೆಯಿಂದ ಹೊರ ಬಂದಿದ್ದು ಇದೀಗ ದೊಡ್ಮನೆಯೊಳಗೆ ಕುರಿ ಪ್ರತಾಪ್, ಶೈನ್ ಶೆಟ್ಟಿ, ವಾಸುಕಿ ವೈಭವ್, ಹರೀಶ್ ರಾಜ್, ಪ್ರಿಯಾಂಕಾ, ಭೂಮಿ ಶೆಟ್ಟಿ ಮತ್ತು ದೀಪಿಕಾ ದಾಸ್ ಉಳಿದಿದ್ದಾರೆ.

ಹರೀಶ್​ ರಾಜ್​

ಅಂದ ಹಾಗೇ ಕಿರುತೆರೆ ನಟಿ ಸಪ್ನಾ ದೀಕ್ಷಿತ್ ತಮ್ಮ ನೆಚ್ಚಿನ ಸ್ಪರ್ಧಿ ಹರೀಶ್ ರಾಜ್ ಅವರಿಗೆ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಮಾತ್ರವಲ್ಲ ಬಿಗ್ ಬಾಸ್ ವಿನ್ನರ್ ಕೂಡಾ ಹರೀಶ್ ಅವರೇ ಆಗುತ್ತಾರೆ ಎಂದು ಹೇಳಿದ್ದಾರೆ. ಬಿಗ್ ಬಾಸ್​​ ವಿಜೇತನಾಗಿ ಹೊರಹೊಮ್ಮುವ ಎಲ್ಲಾ ಸಾಮರ್ಥ್ಯಗಳು ಹರೀಶ್ ರಾಜ್​​ಗೆ ಇದೆ ಎಂದು ಸಪ್ನಾ ದೀಕ್ಷಿತ್ ಹೇಳಿದ್ದಾರೆ.

ನಟಿ ಸಪ್ನಾ ದೀಕ್ಷಿತ್

ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋ ಒಂದನ್ನು ಶೇರ್​ ಮಾಡಿರುವ ಸ್ವಪ್ನಾ, ನಾನು ಹರೀಶ್​ ರಾಜ್​ಗೆ ವೋಟ್​ ಮಾಡುತ್ತೇನೆ. ಬಿಗ್​ ಬಾಸ್​ ನೋಡುವ ಎಲ್ಲರೂ ಹರೀಶ್​ ರಾಜ್​ಗೆ ವೋಟ್​ ಮಾಡಿ ಎಂದು ಮನವಿ ಮಾಡಿದ್ದಾರೆ.

ABOUT THE AUTHOR

...view details