ಕರ್ನಾಟಕ

karnataka

ಸ್ವಾಮಿಯೇ ಅಯ್ಯಪ್ಪ ಅಂತಿದೆ ಪುಕ್ಸಟ್ಟೆ ಲೈಫು!

By

Published : Jan 25, 2020, 7:16 PM IST

ರಂಗಾಯಣ ರಘು, ಸಂಚಾರಿ ವಿಜಯ್​, ಅಚ್ಯುತ್​ ಕುಮಾರ್​​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಪುಕ್ಸಟ್ಟೆ ಲೈಫು  ಪುರ್​ಸೊತ್ತೇ ಇಲ್ಲ ಚಿತ್ರತಂಡ ಸ್ವಾಮಿಯೇ ಅಯ್ಯಪ್ಪ ಎಂಬ ಲಿರಿಕಲ್​ ಹಾಡನ್ನು ರಿಲೀಸ್​ ಮಾಡಿದೆ.

swamiye ayyapa song release by puksatte lyfu team
ಸ್ವಾಮಿಯೇ.. ಅಯ್ಯಪ್ಪ ಅಂತಿದೆ ಪುಕ್ಸಟ್ಟೆ ಲೈಫು!

ಸ್ಯಾಂಡಲ್​ವುಡ್​ನಲ್ಲಿ ಭಿನ್ನ ವಿಭಿನ್ನ ಹಾಡುಗಳು ಇದೀಗ ಸದ್ದು ಮಾಡುತ್ತಿವೆ. ಈಗಾಗಲೇ ಚಾಲ್ತಿಯಲ್ಲಿರುವ ಹಾಡುಗಳಿಗೆ ಕೊಂಚ ರೂಪು ರೇಷೆ ಕೊಟ್ಟು ಹೊಸದಾಗಿ ಹಾಡುಗಳನ್ನು ರಚನೆ ಮಾಡಲಾಗುತ್ತಿದೆ. ಇಂತಹ ಪ್ರಯತ್ನಕ್ಕೆ 'ಪುಕ್ಸಟ್ಟೆ ಲೈಫು' ತಂಡ ಮುಂದಾಗಿದೆ.

ರಂಗಾಯಣ ರಘು, ಸಂಚಾರಿ ವಿಜಯ್​, ಅಚ್ಯುತ್​ ಕುಮಾರ್​​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಪುಕ್ಸಟ್ಟೆ ಲೈಫು ಪುರ್​ಸೊತ್ತೆ ಇಲ್ಲ ಚಿತ್ರತಂಡ ಸ್ವಾಮಿಯೇ ಅಯ್ಯಪ್ಪ ಎಂಬ ಲಿರಿಕಲ್​ ಹಾಡನ್ನು ರಿಲೀಸ್​ ಮಾಡಿದೆ.

ಈ ಹಾಡಿನಲ್ಲಿ ಅಯ್ಯಪ್ಪನ ಧ್ಯಾನ ಮಾಡಲಾಗಿದ್ದು, ನಾವು ಕೇಳಿದ್ದನ್ನು ಕೊಡ್ತಾನೆ, ನಾವು ಬೇಡಿದ್ದನ್ನು ಕೊಡ್ತಾನೆ ಅಯ್ಯಪ್ಪ ಎಂಬ ಸಾಲುಗಳಿಗೆ ರ್ಯಾಪ್​ ಟಚ್​ಕೊಟ್ಟು ಅದ್ಭುತ ಹಾಡನ್ನು ತಯಾರಿಸಲಾಗಿದೆ.

ಇದೀಗ ಯೂಟೂಬ್​ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪುಕ್ಸಟ್ಟೆ ಲೈಫು ಸಿನಿಮಾಕ್ಕೆ ಅರವಿಂದ್​ ಕುಪ್ಲಿಕರ್​​ ಆ್ಯಕ್ಷನ್​ ಕಟ್​ ಹೇಳಿದ್ದು, ನಾಗರಾಜ್​ ಸೋಮಯಾಲಿ ಬಂಡವಾಳ ಹಾಕಿದ್ದಾರೆ. ನಿನ್ನೆ ರಿಲೀಸ್​ ಆಗಿರುವ ಸ್ವಾಮಿಯೇ ಅಯ್ಯಪ್ಪ ಹಾಡಿಗೆ ಆದಿತ್ಯ ಸಾಗರ್​ ಮತ್ತು ವಾಸು ದೀಕ್ಷಿತ್​ ದನಿಯಾಗಿದ್ದಾರೆ.

ABOUT THE AUTHOR

...view details