ಮುಂಬೈ: ಎಲ್ಲ ಹಿಂದೂ ನಟಿಯರು ಜೈರಾ ವಾಸಿಂ ಅವರಿಂದ ಸ್ಫೂರ್ತಿಗೊಳ್ಳಲೇಬೇಕೆಂದು ಅಖಿಲ ಭಾರತೀಯ ಹಿಂದು ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.
ಆ ಧರ್ಮದಲ್ಲಿ ಹುಟ್ಟಿದ್ದೇ ತಪ್ಪಾಯ್ತ..? ಚಿತ್ರರಂಗಕ್ಕೆ ಗುಡ್ ಬೈ ಹೇಳಿದ 'ದಂಗಲ್' ನಟಿ
ಮುಂಬೈ: ಎಲ್ಲ ಹಿಂದೂ ನಟಿಯರು ಜೈರಾ ವಾಸಿಂ ಅವರಿಂದ ಸ್ಫೂರ್ತಿಗೊಳ್ಳಲೇಬೇಕೆಂದು ಅಖಿಲ ಭಾರತೀಯ ಹಿಂದು ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಹೇಳಿದ್ದಾರೆ.
ಆ ಧರ್ಮದಲ್ಲಿ ಹುಟ್ಟಿದ್ದೇ ತಪ್ಪಾಯ್ತ..? ಚಿತ್ರರಂಗಕ್ಕೆ ಗುಡ್ ಬೈ ಹೇಳಿದ 'ದಂಗಲ್' ನಟಿ
ಧರ್ಮದ ಕಾರಣ ನೀಡಿ ಚಿತ್ರರಂಗಕ್ಕೆ ವಿದಾಯ ಹೇಳಿರುವ ಜೈರಾ ವಾಸಿಂ ಅವರಿಗೆ ಬೆಂಬಲಿಸಿರುವ ಸ್ವಾಮಿ, ಹಿಂದೂ ನಟಿಯರು ಕೂಡ ಇವರನ್ನು ಅನುಸರಿಸಬೇಕು ಎಂದಿದ್ದಾರೆ. ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು, ಅಭಿನಯದಿಂದ ಹಿಂದಕ್ಕೆ ಸರಿಯುತ್ತಿರುವ ನಟಿ ಜೈರಾ ನಿರ್ಧಾರ ಪ್ರಶಂಸನೀಯ. ಇವರಿಂದ ಹಿಂದೂ ನಟಿಯರು ಕೂಡ ಸ್ಫೂರ್ತಿಗೊಳ್ಳಬೇಕು ಎಂದಿದ್ದಾರೆ.
ನಂಬೋದಿದ್ರೆ ನಂಬಿ, ಇಲ್ಲದಿದ್ದರೆ ಸುಮ್ನಿರಿ : ನಟಿ ಜೈರಾ ವಾಸಿಂ
ದಂಗಲ್ ಚಿತ್ರದ ಮೂಲಕ ಬಾಲಿವುಡ್ಗೆ ಪ್ರವೇಶಿಸಿದ ಈ ಚೆಲುವೆ, ಐದು ವರ್ಷಗಳ ನಂತರ ಸಿನಿರಂಗದಿಂದ ವಿಮುಖಗೊಂಡಿದ್ದಾರೆ. ಕೈತುಂಬಾ ಅವಕಾಶಗಳು ಇರುವಾಗಲೇ ಅಭಿನಯಕ್ಕೆ ಬೈ ಬೈ ಹೇಳಿ ಹೊರನಡೆದಿದ್ದಾರೆ. ತಮ್ಮ ಈ ದಿಢೀರ್ ತೀರ್ಮಾನಕ್ಕೆ ಧರ್ಮದ ಕಾರಣ ಹೇಳಿರುವ ಅವರು, ಇನ್ಮುಂದೆ ನಾನು ನಟನೆಯಲ್ಲಿ ಮುಂದುವರೆಯುವುದಿಲ್ಲ ಎಂದು ಇನ್ಸ್ಟಾಗ್ರಾಂ, ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.