ಸುಶಾಂತ್ ಸಿಂಗ್ ಸಾವಿನ ಬಳಿಕ ಬೆಳಕಿಗೆ ಬಂದಿದ್ದ ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಬಿ ಅಧಿಕಾರಿಗಳು ಇದೀಗ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳಾಗಿರುವ ಬ್ರಿಟಿಷ್ ನಾಗರಿಕ ಮತ್ತು ಉದ್ಯಮಿ ಆಗಿರುವ ಕರಣ್ ಸಂಜ್ನಾನಿ, ಸೆಲೆಬ್ರಿಟಿ ಮ್ಯಾನೇಜರ್ ರಹೀಲಾ ಫರ್ನೀಚರ್‌ವಾಲಾ ಇವರನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ಇದೀಗ ಜಗದೀಪ್ ಸಿಂಗ್ ಆನಂದ್ ಎಂಬಾತನನ್ನು ಬಂಧಿಸಲಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಕರಣ್ ಸಂಜ್ನಾನಿ ಮತ್ತು ರಹೀಲಾ ಫರ್ನೀಚರ್‌ವಾಲಾ ಬೇರೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದರು. ಸದ್ಯ ಇವರನ್ನು ಸುಶಾಂತ್ ಸಿಂಗ್ ಸಾವಿನ ಪ್ರಕರಣದ ವಿಚಾರಣೆಗೆ ಎನ್‌ಸಿಬಿ ತನ್ನ ವಶಕ್ಕೆ ಪಡೆದಿದೆ.