ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆ ಕಂಡಿರುವ ತಮಿಳು ನಟ ಸೂರ್ಯ ನಟನೆಯ 'ಸುರರಾಯ್ ಪೊಟ್ರು' ಚಿತ್ರ ಬರೋಬ್ಬರಿ 100 ದಿನಗಳನ್ನ ಪೂರೈಸಿದೆ. ಈ ಸುಸಂರ್ಭದಲ್ಲಿ ಚಿತ್ರತಂಡ ಸಿನಿಮಾದಲ್ಲಿ ಡಿಲೀಟ್ ಮಾಡಲಾಗಿದ್ದ ದೃಶ್ಯಗಳನ್ನು ಇಂದು ಬಿಡುಗಡೆ ಮಾಡಿದೆ.
ಸುರರಾಯ್ ಪೊಟ್ರುಗೆ 100 ದಿನ: ಚಿತ್ರದ ಡಿಲೀಟೆಡ್ ಸೀನ್ ರಿಲೀಸ್..! - ಸುರರಾಯ್ ಪೊಟ್ರು
'ಸುರರಾಯ್ ಪೊಟ್ರು' ಚಿತ್ರ ಬರೋಬ್ಬರಿ 100 ದಿನಗಳನ್ನ ಪೂರೈಸಿದೆ. ಈ ಸುಸಂರ್ಭದಲ್ಲಿ ಚಿತ್ರತಂಡ ಸಿನಿಮಾದಲ್ಲಿ ಡಿಲೀಟ್ ಮಾಡಲಾಗಿದ್ದ ದೃಶ್ಯಗಳನ್ನು ಇಂದು ಬಿಡುಗಡೆ ಮಾಡಿದೆ.
![ಸುರರಾಯ್ ಪೊಟ್ರುಗೆ 100 ದಿನ: ಚಿತ್ರದ ಡಿಲೀಟೆಡ್ ಸೀನ್ ರಿಲೀಸ್..! ಸುರರಾಯ್ ಪೊಟ್ರುಗೆ 100 ದಿನ : ಚಿತ್ರದ ಡಿಲೀಟೆಡ್ ಸೀನ್ ರಿಲೀಸ್..!](https://etvbharatimages.akamaized.net/etvbharat/prod-images/768-512-10695353-thumbnail-3x2-giri.jpg)
ಸುರರಾಯ್ ಪೊಟ್ರುಗೆ 100 ದಿನ : ಚಿತ್ರದ ಡಿಲೀಟೆಡ್ ಸೀನ್ ರಿಲೀಸ್..!
ಒಟಿಟಿಯಲ್ಲಿ ತೆರೆಕಂಡ ಸುರರಾಯ್ ಪೊಟ್ರು ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕರ್ನಾಟಕದ ಹೆಮ್ಮೆಯ ಏರ್ ಡೆಕ್ಕನ್ನ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನವನ್ನು ಈ ಸಿನಿಮಾ ಆಧರಿಸಿದೆ. 'ಸಿಂಪಲ್ ಫ್ಲೈ' ಎಂಬ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ಸುಧಾ ಕೊಂಗರಾ ನಿರ್ದೇಶನ ಮಾಡಿದ್ದಾರೆ.
ಇನ್ನು ಸುರರಾಯ್ ಪೊಟ್ರು ಸಿನಿಮಾದಲ್ಲಿ ಸೂರ್ಯನಿಗೆ ಜೋಡಿಯಾಗಿ ಅಪರ್ಣಾ ಬಾಲಮುರಳಿ ನಟಿಸಿದ್ದಾರೆ. ಇನ್ನು ಸಿನಿಮಾದಿಂದ ಅಳಿಸಲಾದ ಕೆಲವು ಸೀನ್ಗಳನ್ನು ಇದೀಗ ಬಿಡುಗಡೆ ಮಾಡಲಾಗಿದ್ದು ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.