ಕರ್ನಾಟಕ

karnataka

ETV Bharat / sitara

ಮುತ್ತಿನನಗರಿಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಸಿಕ್ತು ಸರ್ಪ್ರೈಜ್ ಗಿಫ್ಟ್...! - ramoji film city

ಹೈದರಾಬಾದ್​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ನಡೆಯುತ್ತಿರುವ ಪೊಗರು ಶೂಟಿಂಗ್ ಸ್ಥಳದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಹೈದರಾಬಾದ್​ನ​ ಪುಟ್ಟ ಅಭಿಮಾನಿ ಸರ್ಪ್ರೈಜ್ ಆಗಿ ರಾಖಿ ಕಟ್ಟಿದ್ದಾರೆ.

ಧ್ರುವ ಸರ್ಜಾ

By

Published : Aug 23, 2019, 4:36 AM IST

Updated : Aug 23, 2019, 5:38 AM IST

ಆ್ಯಕ್ಷನ್​ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಪೊಗರು ಚಿತ್ರದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಪೊಗರು ಚಿತ್ರದ ಬಹುತೇಕ ಶೂಟಿಂಗ್ ಹೈದರಾಬಾದ್​ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಧ್ರುವ ಸರ್ಜಾ ಸಹ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಚಿತ್ರದ ಶೂಟಿಂಗ್ ವೇಳೆ ಧ್ರುವ ಸರ್ಜಾಗೆ ಒಂದು ಸರ್ಪ್ರೈಜ್ ಗಿಫ್ಟ್ ಸಿಕ್ಕಿದೆ ಅದೇನಪ್ಪ ಅಂದ್ರೆ ...

ಧ್ರುವ ಸರ್ಜಾಗೆ ರಾಖಿ ಕಟ್ಟಿದ ಹೈದರಾಬಾದ್​ನ ಪುಟ್ಟ ಅಭಿಮಾನಿ

ಹೈದರಾಬಾದ್​ನ ಪುಟ್ಟ ಅಭಿಮಾನಿಯೊಬ್ಬಳು ಧ್ರುವ ಸರ್ಜಾ ಶೂಟಿಂಗ್ ಮಾಡುತ್ತಿದ್ದ ಜಾಗಕ್ಕೆ ಬಂದು, ಪ್ರೀತಿಯಿಂದ ರಾಖಿ ಕಟ್ಟಿದ್ದಾರೆ, ಸರ್ಪ್ರೈಸ್ ಆಗಿ ಬಂದು ಪ್ರೀತಿಯಿಂದ ರಾಕಿ ಕಟ್ಟಿದ ಪುಟ್ಟ ಅಭಿಮಾನಿಯನ್ನು ಆಕ್ಷನ್ ಪ್ರಿನ್ಸ್ ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಬಾಲಕಿ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಆದ್ರೆ ಬಾಲ ಅಭಿಮಾನಿ ಮಾತ್ರ ಪುಲ್​ ಖುಷ್​ ಆಗಿದ್ದಾರೆ.

Last Updated : Aug 23, 2019, 5:38 AM IST

ABOUT THE AUTHOR

...view details