ಕರ್ನಾಟಕ

karnataka

ETV Bharat / sitara

ಆ ದಾಖಲೆ ಮುರಿದ ನಟ ಸೂರ್ಯ: ಮೆಚ್ಚಿನ ನಟನಿಗೆ ಅಭಿಮಾನಿಗಳು ಕೊಟ್ಟ ಭರ್ಜರಿ ಗಿಫ್ಟ್ ಏನು..? - undefined

ತಮಿಳು ನಟ ಸೂರ್ಯ ಅಭಿನಯದ NGK ಸಿನಿಮಾ ಈ ತಿಂಗಳ 31 ರಂದು ತಮಿಳು, ತೆಲುಗು ಎರಡೂ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದ್ದು ಅಭಿಮಾನಿಗಳು ಸೂರ್ಯ ಅವರ 200 ಅಡಿಗೂ ಎತ್ತರವಾದ ಕಟೌಟ್ ನಿರ್ಮಿಸಲು ಹೊರಟಿದ್ದಾರೆ.

ನಟ ಸೂರ್ಯ

By

Published : May 7, 2019, 7:46 PM IST

Updated : May 7, 2019, 8:10 PM IST

ತಮಿಳು ಖ್ಯಾತ ನಟ ಸೂರ್ಯ ನಟನೆಯಿಂದ ಮಾತ್ರವಲ್ಲ ತಮ್ಮ ನಡತೆಯಿಂದ ಕೂಡಾ ಒಳ್ಳೆಯ ಹೆಸರು ಸಂಪಾದಿಸಿದವರು. 'ಅಗರಮ್​​ ಫೌಂಡೇಶನ್' ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದರ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಹಾಗೂ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಸದ್ದಿಲ್ಲದೆ ಮಾಡುತ್ತಾ ಬಂದಿದ್ದಾರೆ.

ಶಾಲಾ ಮಕ್ಕಳೊಂದಿಗೆ ಸೂರ್ಯ

ಸೂರ್ಯ ಸದ್ಯಕ್ಕೆ NGK (ನಂದ ಗೋಪಾಲನ್ ಕುಮಾರನ್​​​) ಸಿನಿಮಾ ಪ್ರಮೋಷನ್​​​ನಲ್ಲಿ ಬ್ಯುಸಿಯಿದ್ದು ಸಿನಿಮಾ ಈ ತಿಂಗಳ 31 ರಂದು ಬಿಡುಗಡೆಯಾಗುತ್ತಿದೆ. ಪೊಲಿಟಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಸಿನಿಮಾವನ್ನು ಸೆಲ್ವ ರಾಘವನ್ ನಿರ್ದೇಶಿಸಿದ್ದಾರೆ. ಸಿನಿಮಾ ತಮಿಳು ಹಾಗೂ ತೆಲುಗು ಎರಡೂ ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಡ್ರೀಮ್ ವಾರಿಯರ್​ ಪಿಕ್ಚರ್ಸ್ ಬ್ಯಾನರ್ ಅಡಿ ಎಸ್​​​.ಆರ್​​. ಪ್ರಭು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇನ್ನು ಜನರಿಗೆ ಸಹಾಯ ಮಾಡುತ್ತಾ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ ಸೂರ್ಯಗೆ ಅಭಿಮಾನಿಗಳು ಕೂಡಾ ಒಂದು ಡೊಡ್ಡ ಗಿಫ್ಟ್ ನೀಡಲು ಹೊರಟಿದ್ದಾರೆ. ತಿರುವಲ್ಲೂರ್ ಜಿಲ್ಲೆಯ ಕೆಲವು ಅಭಿಮಾನಿಗಳು ಸೂರ್ಯ ಅವರ 200 ಅಡಿಗೂ ಎತ್ತರವಾದ ಕಟೌಟ್​ ಮಾಡಿಸಲು ಹೊರಟಿದ್ದಾರೆ. ಇಷ್ಟು ಎತ್ತರದ ಭಾರತದ ಯಾವ ಹೀರೋ ಕಟೌಟನ್ನು ಇದುವರೆಗೂ ನಿರ್ಮಿಸಿಲ್ಲ ಎನ್ನಲಾಗಿದೆ. ಇದಕ್ಕೂ ಮುನ್ನ 'ವಿಶ್ವಾಸಂ' ಸಿನಿಮಾಗಾಗಿ ಅಜಿತ್​ ಅವರ 190 ಅಡಿ ಕಟೌಟನ್ನು ನಿರ್ಮಿಸಲಾಗಿತ್ತು. ಬಿಡುಗಡೆಗೂ ಮುನ್ನ NGK ಸಿನಿಮಾ ಸಾಕಷ್ಟು ವಿಶೇಷತೆಗಳಿಗೆ ಹೆಸರು ಮಾಡುತ್ತಿದೆ. ಇನ್ನು ಸಿನಿಮಾ ಬಿಡುಗಡೆಯಾದ ನಂತರ ಮತ್ತೆಷ್ಟು ದಾಖಲೆಗಳನ್ನು ಮಾಡಲಿದೆಯೋ ಕಾದು ನೋಡಬೇಕು.

ಎನ್​ಜಿಕೆ ಸಿನಿಮಾ

ಸಿನಿಮಾದಲ್ಲಿ ಸಾಯಿ ಪಲ್ಲವಿ, ರಕುಲ್ ಪ್ರೀತ್ ಸಿಂಗ್ ಸೂರ್ಯಗೆ ನಾಯಕಿಯರಾಗಿ ನಟಿಸಿದ್ದಾರೆ. ರಿಲಾಯನ್ಸ್ ಎಂಟರ್​​​ಟೈನ್ಮೆಂಟ್ ಸಂಸ್ಥೆ ಈ ಸಿನಿಮಾವನ್ನು ಹಂಚಿಕೆ ಮಾಡುತ್ತಿದೆ.

Last Updated : May 7, 2019, 8:10 PM IST

For All Latest Updates

TAGGED:

ABOUT THE AUTHOR

...view details