ಕರ್ನಾಟಕ

karnataka

ETV Bharat / sitara

'ಜೈ ಭೀಮ್'​ ಚಿತ್ರದ ಸ್ಫೂರ್ತಿ ಪಾರ್ವತಿ ಅಮ್ಮಾಳ್​ಗೆ 10 ಲಕ್ಷ ರೂ. ನೀಡಿದ ನಟ ಸೂರ್ಯ - ಪಾರ್ವತಿ ಅಮ್ಮಾಳ್​

ಜೈ ಭೀಮ್​ ಚಿತ್ರ ರಿಲೀಸ್​​ ಆಗುತ್ತಿದ್ದಂತೆ ಎಲ್ಲರ ಮನಗೆದ್ದಿದೆ. ನೈಜ ಘಟನೆ ಆಧರಿಸಿ ನಿರ್ಮಾಣಗೊಂಡಿರುವ ಈ ಚಿತ್ರದ ನಿಜವಾದ ಸ್ಫೂರ್ತಿ ಪಾರ್ವತಿ ಅಮ್ಮಾಳ್​ಗೆ ಇದೀಗ ನಟ ಸೂರ್ಯ ಸಹಾಯಹಸ್ತ ಚಾಚಿದ್ದಾರೆ.

actor Suriya
actor Suriya

By

Published : Nov 15, 2021, 8:24 PM IST

Updated : Nov 15, 2021, 8:40 PM IST

ಹೈದರಾಬಾದ್​:ಖ್ಯಾತ ತಮಿಳು ನಟ ಸೂರ್ಯ, ಪ್ರಕಾಶ್‌ರಾಜ್ ಅಭಿನಯದ 'ಜೈ ಭೀಮ್' (Jai Bhim) ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಕೆಲವೊಂದಿಷ್ಟು ವಿರೋಧವೂ ಕೇಳಿ ಬಂದಿದೆ. ಇದರ ಬೆನ್ನಲ್ಲೇ ನಟ ಸೂರ್ಯ ಚಿತ್ರದ ನಿಜವಾದ ಸ್ಫೂರ್ತಿ ಪಾರ್ವತಿ ಅಮ್ಮಾಳ್ (Parvati Ammal)​ಗೆ 10 ಲಕ್ಷ ರೂ. ಹಣ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಸೂರ್ಯ ಹೇಳಿಕೆ ಬಿಡುಗಡೆ ಮಾಡಿದ್ದು, ಪಾರ್ವತಿ ಅಮ್ಮಾಳ್ ಹೆಸರಿನಲ್ಲಿ 10 ಲಕ್ಷ ರೂ (Suriya donates Rs 10 lakh to Parvati Ammal) ಸ್ಥಿರ ಠೇವಣಿ ಇಡಲಾಗುವುದು ಎಂದಿದ್ದಾರೆ. ಸೂರ್ಯ ಹಾಗೂ ಜ್ಯೋತಿಕಾ ಅವರ ಹೋಮ್​ ಪ್ರೊಡಕ್ಷನ್​​ ಬ್ಯಾನರ್​​ ಅಡಿ ಈ ಘೋಷಣೆ ಮಾಡಲಾಗಿದೆ. ಪಾರ್ವತಿ ಅಮ್ಮಾಳ್ ಅವರ​ ನಿಜಜೀವನದ ಸ್ಟೋರಿ ಇದಾಗಿದ್ದು, ಆಕೆಯ ಪತಿ ಪೊಲೀಸ್​ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ನ್ಯಾಯಕ್ಕಾಗಿ ಅವಿರತ ಹೋರಾಟ ನಡೆಸಿದ್ದರು.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಅನಾವರಣಗೊಂಡ ಕೆಲ ಗಂಟೆಗಳಲ್ಲಿ ಗಾಂಧಿ ಕಂಚಿನ ಪ್ರತಿಮೆ ಧ್ವಂಸ

ಠೇವಣಿ ಹಣದಿಂದ ಪ್ರತಿ ತಿಂಗಳು ಬರುವ ಬಡ್ಡಿಯನ್ನು ಪಾರ್ವತಿ ಅಮ್ಮಾಳ್​ ಅವರಿಗೆ ನೀಡಲಾಗುವುದು. ಆಕೆಯ ಮರಣದ ನಂತರ ಈ ಮೊತ್ತ ಅವರ ಮಕ್ಕಳಿಗೆ ಸಿಗಲಿದೆ ಎಂದು ಸೂರ್ಯ ತಿಳಿಸಿದ್ದಾರೆ.

ಜೈ ಭೀಮ್​ 1993ರಲ್ಲಿ ಮದ್ರಾಸ್​ ಹೈಕೋರ್ಟ್​​ನಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರ ಅವರು ವಕೀಲರಾಗಿದ್ದಾಗ ಹೋರಾಡಿರುವ ಪ್ರಕರಣವಾಗಿದೆ. ತಮ್ಮ ಅವಧಿಯಲ್ಲಿ ವಕೀಲ ಚಂದ್ರು ಅವರು 96,000ಕ್ಕೂ ಹೆಚ್ಚು ಪ್ರಕರಣಗಳ ವಿಲೇವಾರಿ ಮಾಡಿದ್ದು, ಅದರಲ್ಲಿ ಅನೇಕ ಮಹತ್ವದ ತೀರ್ಪು ಸೇರಿಕೊಂಡಿವೆ.

ಚಿತ್ರ ರಿಲೀಸ್​ಗೂ ಮುನ್ನವೇ ಇರುಳರು ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಸೂರ್ಯ 1 ಕೋಟಿ ರೂ (Suriyadonated Rs 1 crore) ಅನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದ್ದಾರೆ. ಜೈ ಭೀಮ್ ಚಿತ್ರದಲ್ಲಿ ನಟ ಸೂರ್ಯ ಸೇರಿದಂತೆ ಲಿಜೋಮೋಲ್ ಜೋಸ್, ಕೆ.ಮಣಿಕಂದನ್, ಪ್ರಕಾಶ್ ರಾಜ್, ರಜಿಶಾ ವಿಜಯನ್ ಹಾಗೂ ರಾವ್ ರಮೇಶ್ ನಟನೆ ಮಾಡಿದ್ದಾರೆ.

Last Updated : Nov 15, 2021, 8:40 PM IST

ABOUT THE AUTHOR

...view details