'ಆನೆ ನಡೆದಿದ್ದೇ ದಾರಿ' ಅಂತಾ ಟ್ಯಾಗ್ಲೈನ್ ಇಟ್ಟುಕೊಂಡು ಬರುತ್ತಿರುವ ಸಿನಿಮಾ 'ಸಲಗ'. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಮೇಲೆ ಸ್ಯಾಂಡಲ್ವುಡ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ. ಈಗಾಗಲೇ ಮೇಕಿಂಗ್ ವಿಡಿಯೋ ಕೂಡಾ ಸಖತ್ ಸದ್ದು ಮಾಡಿದೆ.
'ಸಲಗ' ಚಿತ್ರದ ಮೊದಲ ಲಿರಿಕಲ್ ಹಾಡು ರಿಲೀಸ್... ಟ್ರೆಂಡಿಂಗ್ನಲ್ಲಿದ್ದಾನೆ 'ಸೂರಿಯಣ್ಣ' - ಸಲಗ ಸಿನಿಮಾದ ಮೊದಲ ಲಿರಿಕಲ್ ಹಾಡು ಬಿಡುಗಡೆ
ಈ ವರ್ಷದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲೂ 'ಸಲಗ' ಚಿತ್ರದ ಈ ಹಾಡು ಸದ್ದು ಮಾಡುವ ಮುನ್ಸೂಚನೆಯಿದೆ. ಇಂದು ಬೆಳಗ್ಗೆ ಈ ಸಿನಿಮಾದ 'ಸೂರಿ ಅಣ್ಣ' ಎಂಬ ಮಾಸ್ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಈ ಹಾಡಿನ ಲಿರಿಕಲ್ ವಿಡಿಯೋವನ್ನು ನಿನ್ನೆಯಷ್ಟೇ ಅದ್ದೂರಿಯಾಗಿ ಲಾಂಚ್ ಮಾಡಿದ್ದರು.

ಇನ್ನು ಚಿತ್ರತಂಡ ಇಂದು ಬೆಳಗ್ಗೆ ಈ ಸಿನಿಮಾದ 'ಸೂರಿ ಅಣ್ಣ' ಎಂಬ ಮಾಸ್ ಹಾಡನ್ನು ಯೂಟ್ಯೂಬ್ನಲ್ಲಿ ಬಿಡುಗಡೆ ಮಾಡಿದೆ. ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಈ ಹಾಡಿನ ಲಿರಿಕಲ್ ವಿಡಿಯೋವನ್ನು ನಿನ್ನೆಯಷ್ಟೇ ಅದ್ದೂರಿಯಾಗಿ ಲಾಂಚ್ ಮಾಡಿದ್ದರು. ಎ2 ಆಡಿಯೋ ಕಂಪನಿ ಈ ಸಿನಿಮಾದ ಆಡಿಯೋ ರೈಟ್ಸ್ ಪಡೆದುಕೊಂಡಿದೆ. 'ಸೂರಿಯಣ್ಣ' ಹಾಡು ಬಿಡುಗಡೆ ಆಗುತ್ತಿದ್ದಂತೆ ಸಖತ್ ಸೆನ್ಸೇಷನ್ ಹುಟ್ಟುಹಾಕಿದೆ. ಟಗರು ಖ್ಯಾತಿಯ ಚರಣ್ ರಾಜ್ ಹಾಗೂ ನವೀನ್ ಸಜ್ಜು ಸೇರಿ ಈ ಹಾಡಿಗೆ ಸಂಗೀತ ನೀಡಿದ್ದಾರೆ. ದುನಿಯಾ ವಿಜಯ್, ಕರಣ್ ಹಾಗೂ ತಂಡ ಈ ಹಾಡಿನ ಸಾಹಿತ್ಯ ಬರೆದಿದ್ದರೆ, ತಮಿಳು ಗಾಯಕ ಆಂಟೋನಿ ದಾಸನ್ ಈ ಹಾಡನ್ನು ಹಾಡಿದ್ದಾರೆ. 'ಟಗರು' ಸಿನಿಮಾದ ಟೈಟಲ್ ಹಾಡು ಹಾಡಿದ್ದು ಕೂಡಾ ಆಂಟೋನಿ ದಾಸನ್.
ಈ ವರ್ಷದ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲೂ 'ಸಲಗ' ಚಿತ್ರದ ಈ ಹಾಡು ಸದ್ದು ಮಾಡುವ ಮುನ್ಸೂಚನೆಯಿದೆ. 'ಟಗರು' ಚಿತ್ರವನ್ನು ನಿರ್ಮಿಸಿದ್ದ ಕೆ.ಪಿ. ಶ್ರೀಕಾಂತ್ ಈ ಚಿತ್ರವನ್ನು ಕೂಡಾ ನಿರ್ಮಿಸಿದ್ದಾರೆ. 'ಟಗರು' ಚಿತ್ರದ ಬಹುತೇಕ ತಂತ್ರಜ್ಞರೇ 'ಸಲಗ' ಸಿನಿಮಾದಲ್ಲಿ ಕೂಡಾ ಇದ್ದು ಈ ಸಿನಿಮಾ ಕೂಡಾ ದೊಡ್ಡ ಯಶಸ್ಸು ಕಾಣಲಿದೆ ಎಂದು ಸೆಂಚುರಿ ಸ್ಟಾರ್ ಶುಭ ಕೋರಿದ್ದಾರೆ. ದುನಿಯಾ ವಿಜಯ್ಗೆ ಸಂಜನಾ ಆನಂದ್ ಜೋಡಿಯಾಗಿದ್ದಾರೆ. ಇವರೊಂದಿಗೆ ಡಾಲಿ ಧನಂಜಯ್, ಕಾಕ್ರೋಚ್ ಖ್ಯಾತಿಯ ಸುಧೀಂದ್ರ ಸೇರಿದಂತೆ ಸಾಕಷ್ಟು ಕಲಾವಿದ ದಂಡು ಈ ಚಿತ್ರದಲ್ಲಿದೆ.