ಕರ್ನಾಟಕ

karnataka

ETV Bharat / sitara

''ಮನೆ ಕಟ್ಟಲು ಸಹಕಾರ ನೀಡುವ ಭರವಸೆ ನೀಡಿದ್ದರು, ಆದ್ರೆ ಇಂದು ಅವರೇ ಇಲ್ಲ''- ಅಪ್ಪುವಿನ ನೆನಪಿನಲ್ಲಿ ಎಂ.ಕೆ ಮಠ - ಉಪ್ಪಿನಂಗಡಿ ಲೇಟೆಸ್ಟ್ ನ್ಯೂಸ್

ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಉಪ್ಪಿನಂಗಡಿ(uppinangady) ಸಮೀಪದ ಕೂಟೇಲು ನಿವಾಸಿ ಎಂ.ಕೆ ಮಠ(Supporting actor M K mata) ಅವರಿಗೆ ಪುನೀತ್ ರಾಜ್‌ಕುಮಾರ್ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆದರೆ ಅವರ ಆಕಸ್ಮಿಕ ಅಗಲಿಕೆಯನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಎಂ.ಕೆ ಮಠ ಭಾವುಕರಾಗಿದ್ದಾರೆ.

Supporting actor M K mata remembers the movement with  puneeth rajkumar
ಅಪ್ಪುವಿನ ನೆನೆಪಿನಲ್ಲಿ ಎಂ.ಕೆ ಮಠ

By

Published : Nov 13, 2021, 6:48 AM IST

Updated : Nov 13, 2021, 7:16 AM IST

ಉಪ್ಪಿನಂಗಡಿ:ಪವರ್‌ ಸ್ಟಾರ್ ಪುನೀತ್​ ರಾಜ್‌ಕುಮಾರ್ (puneeth rajkumar) ಅಗಲಿಕೆ ಮರೆಯಲಾಗದ ನೋವು. ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪೋಷಕ ನಟರೊಬ್ಬರು ತಮ್ಮ ಮೆಚ್ಚಿನ ಅಪ್ಪುವಿನ(appu) ನೆನಪಲ್ಲೇ ಕಾಲ ಕಳೆಯುತ್ತಿದ್ದಾರೆ‌.

ಅಪ್ಪುವಿನ ನೆನೆಪಿನಲ್ಲಿ ಎಂ.ಕೆ ಮಠ

ಹಲವಾರು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿರುವ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಉಪ್ಪಿನಂಗಡಿ (uppinangady) ಸಮೀಪದ ಕೂಟೇಲು ನಿವಾಸಿ ಎಂ.ಕೆ ಮಠ (Supporting actor M K matha) ಅವರಿಗೆ ಪುನೀತ್ ರಾಜ್‌ಕುಮಾರ್ ಅಭಿನಯದ ''ಯುವರತ್ನ'' ಚಿತ್ರ (yuvaratna film)ದಲ್ಲಿ ಕಾಲೇಜಿನಲ್ಲಿ ಬೆಲ್ ಹೊಡೆಯುವ ವ್ಯಕ್ತಿಯ ಪಾತ್ರ ಮಾಡುವ ಅವಕಾಶ ಸಿಕ್ಕಿತ್ತು.

ಈ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಪುನೀತ್ ರಾಜ್‍ಕುಮಾರ್ ಅವರು ಎಂ.ಕೆ ಮಠ ಅವರ ಬಳಿಗೆ ಬಂದು ಅವರನ್ನು ತಬ್ಬಿಕೊಳ್ಳುವ ಒಂದು ದೃಶ್ಯವಿದೆ. ಇದನ್ನೂ ಇಂದಿಗೂ ನೆನೆಸಿಕೊಂಡು ಎಂ.ಕೆ ಮಠ ಅವರು ಭಾವುಕರಾಗುತ್ತಾರೆ.

ಇದನ್ನೂ ಓದಿ:ಪವರ್ ಸ್ಟಾರ್ ನೆನದು ಭಾವುಕರಾದ ರಕ್ಷಿತಾ ಪ್ರೇಮ್, ತೆಲುಗು ಗಾಯಕಿ ಮಂಗ್ಲಿ!

ಎಂ.ಕೆ ಮಠ ಅವರಿಗೆ ವಾಸಕ್ಕೆ ಒಂದು ಸ್ವಂತ ಮನೆ ಇರಲಿಲ್ಲ. ಬದುಕಿನಲ್ಲಿ ಪರೋಪಕಾರಿ ಮನೋಭಾವ ಹೊಂದಿದ್ದ ಪುನೀತ್ ರಾಜ್‍ಕುಮಾರ್ ಅವರು ಮನೆಯಿಲ್ಲದ ಎಂ.ಕೆ ಮಠ ಅವರಿಗೆ ಮನೆಯೊಂದನ್ನು ಕಟ್ಟಲು ಸಹಕಾರ ನೀಡುವ ಭರವಸೆ ನೀಡಿದ್ದರು. ಆದರೆ, ನಂತರದಲ್ಲಿ ಕೊರೊನಾ ಮಹಾಮಾರಿ ಮತ್ತು ಲಾಕ್‌ಡೌನ್ ಉಂಟಾದ ಹಿನ್ನೆಲೆ, ಪುನೀತ್ ಅವರನ್ನು ಸಂಪರ್ಕಿಸಲು ಎಂ.ಕೆ ಮಠ ಅವರಿಗೂ ಸಾಧ್ಯವಾಗಿರಲಿಲ್ಲ.

ಆದರೆ, ಒಂದಲ್ಲ ಒಂದು ದಿನ ತನಗೆ ತನ್ನ ಅಪ್ಪು ಸಹಾಯ ಮಾಡೇ ಮಾಡುತ್ತಾರೆ ಭರವಸೆಯೊಂದಿಗೆ ಬದುಕುತ್ತಿದ್ದ ಎಂ.ಕೆ ಮಠ ಅವರಿಗೆ ಪುನೀತ್ ರಾಜ್‍ಕುಮಾರ್ ಅವರ ಆಕಸ್ಮಿಕ ಅಗಲಿಕೆಯನ್ನು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತನ್ನ ಏಕೈಕ ಭರವಸೆಯೂ ಇಲ್ಲದಂತಾಯಿತು ಎಂ.ಕೆ ಮಠ ಅವರು ಬೇಸರ ವ್ಯಕ್ತಪಡಿಸಿದರು.

Last Updated : Nov 13, 2021, 7:16 AM IST

ABOUT THE AUTHOR

...view details