ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ, ಇಡೀ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ ಸೂಪರ್ ಸ್ಟಾರ್ ರಜಿನಿಕಾಂತ್. ಬೆಂಗಳೂರಿಗೂ ಅವರಿಗೂ ಒಂದು ಅವಿನಾಭಾವ ನಂಟು. ತಲೈವಾ ಆಗಾಗ ಬೆಂಗಳೂರಿಗೆ ಬಂದು ತಮ್ಮ ಸ್ನೇಹಿತರನ್ನು, ಸಂಬಂಧಿಕರನ್ನು ಭೇಟಿಯಾಗಿ ಹೋಗ್ತಿರ್ತಾರೆ.
ರಜಿನಿಕಾಂತ್ ಬೆಂಗಳೂರಿಗೆ ಬಂದಿಲ್ಲ.. ಸಹೋದರನ ಪುತ್ರ ಆನಂದ್ ಸ್ಪಷ್ಟನೆ - superstar relative anand,
ರಜಿನಿಕಾಂತ್ ಬೆಂಗಳೂರಿಗೆ ಬಂದಿಲ್ಲ, ಅವರು ಚೆನ್ನೈನಲ್ಲಿಯೇ ಇದ್ದಾರೆ. ವದಂತಿಗಳೆಲ್ಲ ಶುದ್ಧ ಸುಳ್ಳು ಎಂದು ಅವರ ಸಹೋದರನ ಪುತ್ರ ಆನಂದ್ ಸ್ಪಷ್ಟನೆ ನೀಡಿದ್ದಾರೆ.

ಆದರೆ, ನಿನ್ನೆ ರಾತ್ರಿ ವಿವೇಕನಗರದ ಚರ್ಚ್ಗೆ ರಜಿನಿ ಬಂದಿದ್ದು, ಸಾಮಾನ್ಯರಂತೆ ತಿರುಗಾಡಿದ್ದಾರೆ ಎಂದು ಮಾಧ್ಯಮಗಳು ಪ್ರಸಾರ ಮಾಡಿದ್ದವು. ಈ ಹಿನ್ನೆಲೆ ಅಭಿಮಾನಿಗಳು ಅವರ ಸಂಬಂಧಿಕರಿಗೆ ಫೋನ್ ಮಾಡಿ ರಜಿನಿ ಬಂದಿದ್ದಾರಾ ಎಂದು ವಿಚಾರಿಸಿ ಅವರಿಗೆ ಕಿರಿಕಿರಿ ಉಂಟು ಮಾಡಿದ್ದಾರೆ. ಈ ಸಂಬಂಧ ಅವರ ಸಹೋದರ ಸತ್ಯನಾರಾಯಣ್ ಪುತ್ರ ಆನಂದ್ ಸ್ಪಷ್ಟೀಕರಣ ನೀಡಿದ್ದಾರೆ. ರಜಿನಿಕಾಂತ್ ಬೆಂಗಳೂರಿಗೆ ಬಂದಿಲ್ಲ. ಅವರು ಸಿಟಿಗೆ ಬಂದಿದ್ದಾರೆ ಅನ್ನೋ ಸುದ್ದಿ ಸುಳ್ಳು ಎಂದಿದ್ದಾರೆ.
ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ಅಣ್ಣಾತ್ತೆ'ಯ ಮತ್ತೊಂದು ಲಿರಿಕಲ್ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಸದ್ಯ ರಿಲೀಸ್ ಬಿಡುಗಡೆಯಾಗಿರುವ ಸಾರಾ ಕಾಟ್ರೆ ಲಿರಿಕಲ್ ಹಾಡಿನಲ್ಲಿ ರಜಿನಿಕಾಂತ್ ಮತ್ತು ನಯನ ತಾರಾ ಕಾಂಬಿನೇಷನ್ ಸಖತಾಗಿ ವರ್ಕೌಟ್ ಆಗಿದೆ. ಗಾಯಕರಾದ ಶ್ರೇಯಾ ಘೋಷಾಲ್ ಮತ್ತು ಸಿದ್ ಶ್ರೀರಾಮ್ ಈ ಹಾಡನ್ನು ಹಾಡಿದ್ದಾರೆ.