ದರ್ಬಾರ್, ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ 167ನೇ ಸಿನಿಮಾ. ಇನ್ನು ರಜನೀಕಾಂತ್ ಸಿನಿಮಾಗಳೆಂದರೆ ಕೇಳಬೇಕೆ? ತಮಿಳುನಾಡು ಮಾತ್ರವಲ್ಲ, ದೇಶ, ವಿದೇಶಗಳಲ್ಲಿ ಅವರ ಸಿನಿಮಾಗಳ ಅಪ್ಡೇಟ್ಗಾಗಿ ಅಭಿಮಾನಿಗಳು ಕಾಯುತ್ತಿರುತ್ತಾರೆ.
'ದರ್ಬಾರ್' ರಜನೀಕಾಂತ್ ಎರಡನೇ ಲುಕ್ ಬಿಡುಗಡೆ; ಟ್ವಿಟ್ಟರ್ ಟ್ರೆಂಡಿಂಗ್ನಲ್ಲಿರುವ ಪೋಸ್ಟರ್ - ರಜನೀಕಾಂತ್ ಬೈಸಪ್ಸ್
ಎ.ಆರ್. ಮುರುಗದಾಸ್ ನಿರ್ದೇಶನದಲ್ಲಿ ರಜನೀಕಾಂತ್ ಅಭಿನಯದ 'ದರ್ಬಾರ್' ಸಿನಿಮಾದ ರಜನೀಕಾಂತ್ ಎರಡನೇ ಲುಕ್ ಬಿಡುಗಡೆಯಾಗಿದೆ. ಟ್ವಿಟ್ಟರ್ನಲ್ಲಿ ಈ ಪೋಸ್ಟರ್ ಟ್ರೆಂಡಿಂಗ್ನಲ್ಲಿದೆ. ಸುಮಾರು 25 ವರ್ಷಗಳ ನಂತರ ರಜನೀಕಾಂತ್ ಈ ಸಿನಿಮಾ ಮೂಲಕ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ಇದೀಗ ದರ್ಬಾರ್ ಸಿನಿಮಾದ ಎರಡನೇ ಲುಕ್ ಬಿಡುಗಡೆಯಾಗಿದೆ. ರಜನೀಕಾಂತ್ ಸುಮಾರು 25 ವರ್ಷಗಳ ನಂತರ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಏಪ್ರಿಲ್ನಲ್ಲಿ ಬಿಡುಗಡೆಯಾಗಿದ್ದ ಮೊದಲ ಲುಕ್ ಬಹಳ ವಿಭಿನ್ನವಾಗಿತ್ತು. ಇದೀಗ ಚಿತ್ರದ ಎರಡನೇ ಲುಕ್ ಬಿಡುಗಡೆಯಾಗಿದ್ದು ಈ ಪೋಸ್ಟರ್ ನೋಡಿದರೆ ರಜನಿಗೆ ವಯಸ್ಸಾಗಿದೆ ಎಂದು ಹೇಳಲು ಸಾಧ್ಯವೇ ಇಲ್ಲ. ಕಬ್ಬಿಣದ ರಾಡ್ವೊಂದನ್ನು ಹಿಡಿದಿರುವ ಆವೇಶಭರಿತ ರಜನಿ ಮುಖವನ್ನು ಈ ಪೋಸ್ಟರ್ನಲ್ಲಿ ನೋಡಬಹುದು. ಅಲ್ಲದೆ ರಜನೀಕಾಂತ್ ಬೈಸೆಪ್ಸ್ ಕೂಡಾ ಕಾಣಬಹುದು. ಈ ಪೋಸ್ಟರ್ ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗುತ್ತಿದ್ದು ಎ.ಆರ್. ಮುರುಗದಾಸ್ ಸಿನಿಮಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ. 2020 ಸಂಕ್ರಾಂತಿ ವೇಳೆಗೆ ಸಿನಿಮಾ ಬಿಡುಗಡೆಯಾಗಲಿದೆ.