ಕರ್ನಾಟಕ

karnataka

ETV Bharat / sitara

ಮೊಣಕಾಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಟಾಲಿವುಡ್​ ಸೂಪರ್ ಸ್ಟಾರ್ ಮಹೇಶ್ ಬಾಬು: ಚಿತ್ರೀಕರಣದಿಂದ ಬ್ರೇಕ್​ - sarkaru vaari paata release date

ವೈದ್ಯರ ಸಲಹೆಯಂತೆ ಟಾಲಿವುಡ್​ ನಟ ಮಹೇಶ್ ಬಾಬು ಕುಟುಂಬ ಸಮೇತ ಸ್ಪೇನ್​ಗೆ ತೆರಳಿದ್ದರು. ಅಲ್ಲಿ ಅವರು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಸದ್ಯ ದುಬೈನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.

SUPER STAR MAHESH BABU UNDERGOES KNEE SURGERY
ಟಾಲಿವುಡ್​ ಸೂಪರ್ ಸ್ಟಾರ್ ಮಹೇಶ್ ಬಾಬು

By

Published : Dec 14, 2021, 4:13 PM IST

ಹೈದರಾಬಾದ್​: ಟಾಲಿವುಡ್​ ಸೂಪರ್ ಸ್ಟಾರ್ ಮಹೇಶ್ ಬಾಬು ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ದುಬೈನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ನಟ ಮಹೇಶ್ ಬಾಬು ಮಂಡಿ ನೋವಿನಿಂದ ಬಳಲುತ್ತಿದ್ದರು. ಇತ್ತೀಚೆಗೆ ನೋವು ಉಲ್ಬಣಗೊಂಡಿದ್ದರಿಂದ ಶಸ್ತ್ರಚಿಕಿತ್ಸೆಮಾಡಿಸಿಕೊಳ್ಳುವಂತೆ ವೈದ್ಯರು ಅವರಿಗೆ ಸಲಹೆ ನೀಡಿದ್ದರು.

ವೈದ್ಯರ ಸಲಹೆಯಂತೆ ಮಹೇಶ್ ಬಾಬು ಕುಟುಂಬ ಸಮೇತ ಸ್ಪೇನ್​ಗೆ ತೆರಳಿದ್ದರು. ಅಲ್ಲಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ದುಬೈನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಳ್ಳುವವರೆಗೂ ಅವರು ಅಲ್ಲೆಯೇ ಇರಲಿದ್ದಾರೆ. ಹಾಗಾಗಿ ತಮ್ಮ ನೂತನ ಚಿತ್ರ 'ಸರ್ಕಾರು ವಾರಿ ಪಾಠ' ಚಿತ್ರೀಕರಣದಿಂದ ಬ್ರೇಕ್​ ತೆಗೆದುಕೊಂಡಿದ್ದಾರೆ.

'ಸರ್ಕಾರು ವಾರಿ ಪಾಠ' ಚಿತ್ರವನ್ನು ಪರಶುರಾಮ್ ನಿರ್ದೇಶನ ಮಾಡುತ್ತಿದ್ದು ಕೀರ್ತಿ ಸುರೇಶ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಮಹೇಶ್ ಬಾಬು ಗೈರು ಹಾಜರಾಗಿರುವ ದೃಶ್ಯಗಳ ಹೊರತಾಗಿ ಉಳಿದ ಭಾಗದ ಚಿತ್ರಕರಣ ಮಾಡಲು ತಂಡ ಪ್ಲಾನ್​ ಮಾಡಿಕೊಂಡಿದೆ.

ಫೆಬ್ರವರಿಯಿಂದ ಮಹೇಶ್ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಚಿತ್ರವು ಏಪ್ರಿಲ್ 1, 2022 ರಂದು ಬಿಡುಗಡೆಯಾಗಲಿದೆ. ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ತಮನ್ ಸಂಗೀತವಿದೆ. ಇನ್ನು ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಆಗಮನಕ್ಕಾಗಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ದೇಹ ಸೌಂದರ್ಯದ ಬಗ್ಗೆ ಕಾಮೆಂಟ್​ ಮಾಡಿದವರಿಗೆ ಕಿರಿಕ್​ ಸುಂದರಿಯ ಹ್ಯಾಟ್ಸ್ ಆಫ್​​

ABOUT THE AUTHOR

...view details