ಮಾದಕ ಸುಂದರಿ, ಪಡ್ಡೆ ಹುಡುಗರ ಹೃದಯದರಸಿ ಸನ್ನಿ ಲಿಯೋನ್ ಭಾರತಕ್ಕೆ ಬರಲು ಇಚ್ಚಿಸಿದ್ದಾರಂತೆ. ಈ ಹಿಂದೆ ತಮ್ಮ ಪತಿ ಡೇನಿಯಲ್ ವೆಬರ್ ಮತ್ತು ಅವರ ಮೂವರು ಮಕ್ಕಳಾದ ನಿಶಾ, ಆಶರ್ ಮತ್ತು ನೋವಾ ಜೊತೆ ಲಾಸ್ ಏಂಜಲಿಸ್ಗೆ ತೆರಳಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸನ್ನಿ, ನನಗೆ ಮುಂಬೈ ಬಿಟ್ಟುಹೋಗಲು ಇಷ್ಟವಿರಲಿಲ್ಲ. ಆದ್ರೆ ಡೇನಿಯಲ್ ತಾಯಿ ಮತ್ತು ಅವರ ಕುಟುಂಬಕ್ಕೋಸ್ಕರ ಅಲ್ಲಿಗೆ ತೆರಳಬೇಕಾಯಿತು ಎಂದಿದ್ದಾರೆ. ಅಲ್ಲದೇ ವಿಮಾನ ಹಾರಾಟ ಪ್ರಾರಂಭ ಆದಾಗ, ಆದಷ್ಟು ಬೇಗ ಮುಂಬೈ ಮನೆಗೆ ಬರುವುದಾಗಿ ತಿಳಿಸಿದ್ದಾರೆ.