ತಮ್ಮ ಮಾದಕ ಮೈಮಾಟದಿಂದ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿರುವ ಬಾಲಿವುಡ್ ನಟಿ ಸನ್ನಿ ಲಿಯೋನ್ ಇದೀಗ ಮಾಲ್ಡೀವ್ಸ್ ಬೀಚ್ಗಳಲ್ಲಿ ಕುಟುಂಬದೊಂದಿಗೆ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ.
ಮಾಲ್ಡೀವ್ಸ್ ಕಡಲ ತೀರದಲ್ಲಿ ಸನ್ನಿ ಲಿಯೋನ್ ಕಡಲತೀರದಲ್ಲಿ ತುಂಡುಡುಗೆ ಧರಿಸಿಕೊಂಡು ಕ್ಯಾಮರಾಗೆ ಪೋಸ್ ಕೊಟ್ಟಿರುವ ಅವರು ಇನ್ಸ್ಟಾಗ್ರಾಂ ಖಾತೆಗೆ ಹೊಸ ಫೋಟೋಗಳನ್ನು ಅಪ್ಲೋಡ್ ಮಾಡಿದ್ದಾರೆ.
ಕಳೆದೊಂದು ವಾರದಿಂದಲೂ ಮಾಲ್ಡೀವ್ಸ್ನಲ್ಲೇ ಬೀಡುಬಿಟ್ಟಿರುವ ಸನ್ನಿ ಕುಟುಂಬದೊಂದಿಗೆ ರಜಾ ದಿನಗಳ ಮಜಾ ಅನುಭಿಸುತ್ತಿದ್ದಾರೆ. ನೀಲಿ ಬಣ್ಣದ ಬಿಕಿನಿ ಧರಿಸಿರುವ ಫೋಟೋ ಶೇರ್ ಮಾಡಿರುವ ಅವರು, Just another day in paradise! ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಪಡ್ಡೆ ಹುಡುಗರ ನಿದ್ದೆ ಕದ್ದ ಮಾದಕ ನಟಿ ಸನ್ನಿ
ಸ್ಯಾಂಡಲ್ವುಡ್ ಸೇರಿದಂತೆ ಬಾಲಿವುಡ್ನ ಅನೇಕ ಚಿತ್ರಗಳಲ್ಲಿ ನಟಿಸಿರುವ ಸನ್ನಿ, ಇನ್ಸ್ಟಾಗ್ರಾಂನಲ್ಲಿ ಮೇಲಿಂದ ಮೇಲೆ ವಿಭಿನ್ನವಾದ ಫೋಟೋಗಳನ್ನು ಹಾಕಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮನಸ್ಸು ಕದಿಯುತ್ತಿರುತ್ತಾರೆ.
ಕಡಲ ಕಿನ್ನಾರೆಯಲ್ಲಿ ಸನ್ನಿ ಲಿಯೋನ್