ಬಾಲಿವುಡ್ ಆ್ಯಕ್ಷನ್ ಹೀರೋ ಮತ್ತು ರಾಜಕಾರಣಿ ಸನ್ನಿ ಡಿಯೋಲ್ ಮನಾಲಿಯಲ್ಲಿ ಹಿಮಪಾತವನ್ನು ಆನಂದಿಸುತ್ತಿದ್ದಾರೆ. ಸನ್ನಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮನಾಲಿಯಿಂದ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಸೋಮವಾರ, ನಟ ಹಿಮದ ಗಡ್ಡೆಗಳೊಂದಿಗೆ ಆಟವಾಡುತ್ತಿರುವ ದೃಶ್ಯವಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಜತೆಗೆ ಅವರು ವಿಡಿಯೋಗೆ "ನಿಮ್ಮ ಹೃದಯವನ್ನು ಸಂತೋಷಪಡಿಸಲು ಬಯಸಿದರೆ, ಹಿಮದಲ್ಲಿ ನೃತ್ಯ ಮಾಡಿ" ಎಂದು ಶೀರ್ಷಿಕೆ ನೀಡಿದ್ದಾರೆ.