ಮುಂಬೈ :ಜನವರಿ 27ರಂದು ಏಷ್ಯನ್ ಹಾರ್ಟ್ ಇನ್ಸ್ಟಿಟ್ಯೂಟ್ಗೆ ದಾಖಲಾಗಿದ್ದ 'ದಿ ಕಪಿಲ್ ಶರ್ಮಾ ಶೋ' ಖ್ಯಾತಿಯ ಹಾಸ್ಯ ನಟ ಸುನಿಲ್ ಗ್ರೋವರ್ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಇದೀಗ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಕೆಲ ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆಂದು ತಿಳಿದು ಬಂದಿದೆ.
ಕಪಿಲ್ ಶರ್ಮಾ ನಡೆಸಿಕೊಡುತ್ತಿದ್ದ ದಿ ಕಪಿಲ್ ಶರ್ಮಾ ಶೋನಲ್ಲಿ ವಿವಿಧ ಪಾತ್ರ ಮಾಡುವ ಮೂಲಕ ಎಲ್ಲರನ್ನೂ ನಗಿಸುತ್ತಿದ್ದ ಸುನೀಲ್ ಗ್ರೂವರ್ ಅನೇಕ ನಟರಂತೆ ಮಿಮಿಕ್ರಿ ಸಹ ಮಾಡಿದ್ದರು.
ಕಾಮಿಡಿ ಜೊತೆಗೆ ಅಕ್ಷಯ್ ಕುಮಾರ್ ಅಭಿನಯದ ಗಬ್ಬರ್ ಈಸ್ ಬ್ಯಾಕ್, ಸೈಫ್ ಅಲಿ ಖಾನ್ ವೆಬ್ ಸಿರೀಸ್ ತಾಂಡವ್, ಸಲ್ಮಾನ್ ಖಾನ್ ನಟನೆಯ ಭಾರತ್ ಹಾಗೂ ಶಾರುಖ್ ಖಾನ್ ಅವರ ಮುಂಬರುವ ಚಿತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
ತಮ್ಮ ಚಿತ್ರದ ಪ್ರಮೋಷನ್ಗಾಗಿ ಕಪಿಲ್ ಶರ್ಮಾ ಶೋಗೆ ಆಗಮಿಸುತ್ತಿದ್ದ ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್, ಶಿಲ್ಪಾ ಶೆಟ್ಟಿ, ಕಂಗನಾ, ಅಜಯ್ ದೇವಗನ್ ಸೇರಿದಂತೆ ಅನೇಕರನ್ನ ಇವರು ನಗಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ