ಕರ್ನಾಟಕ

karnataka

ETV Bharat / sitara

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯಾದ ಸುನೀಲ್ ಪುರಾಣಿಕ್ - Sunil Appoints Karnataka Film Academy chairman

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಟ, ನಿರ್ದೇಶಕ ಸುನೀಲ್ ಪುರಾಣಿಕ್​​ ಅವರನ್ನು  ಅಧ್ಯಕ್ಷರಾಗಿ ನೇಮಕವಾಗಿದ್ದಾರೆ.

Sunil Appoints Karnataka Film Academy chairman
ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯಾದ ಸುನೀಲ್ ಪುರಾಣಿಕ್

By

Published : Jan 2, 2020, 4:54 PM IST

ಕನ್ನಡ ಚಿತ್ರರಂಗಕ್ಕೆ ಅತೀ ಮುಖ್ಯವಾಗಿ ಇರುವ ಅಕಾಡೆಮಿ ಅಂದ್ರೆ ಅದು ಕರ್ನಾಟಕ ಚಲನಚಿತ್ರ ಅಕಾಡೆಮಿ. ಕೆಲ ತಿಂಗಳ ಹಿಂದೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅಕಾಡೆಮಿ ಅಧ್ಯಕ್ಷರಾಗಿದ್ರು. ಇವರು ಅಧ್ಯಕ್ಷಸ್ಥಾನದಿಂದ ತೆರೆವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ನಟ, ನಿರ್ದೇಶಕ ಸುನೀಲ್ ಪುರಾಣಿಕ್​​ ಅವರನ್ನು ಅಧ್ಯಕ್ಷರಾಗಿ ನೇಮಿಸಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ನೂತನ ಸಾರಥಿಯಾದ ಸುನೀಲ್ ಪುರಾಣಿಕ್

ಅಧಿಕಾರ ಸ್ವೀಕರಿಸಿದ ಮೇಲೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷರ ಕೊಠಡಿಯಲ್ಲಿ ಹೋಮ ಪೂಜೆ ಮಾಡಲಾಯಿತು. ಪುರೋಹಿತರ ಸೂಚನೆ ಮೇರೆಗೆ ಸುನೀಲ್ ಪುರಾಣಿಕ್ ಕುಟುಂಬ ಸಮೇತ ಅಧ್ಯಕ್ಷ ಸ್ಥಾನಕ್ಕೆ ಪೂಜೆ ಸಲ್ಲಿಸಿ, ತಾವು ಕುಳಿತುಕೊಳ್ಳವ ಸೀಟಿಗೆ ಹೂವಿನ ಕಂಕಣ ಕಟ್ಟಿ ಪೂಜೆ ಮಾಡಿದ್ರು. ನಂತರ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಸಹಿ ಹಾಕಿದ್ರು.

ನೂತನ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಿಗೆ, ನಿರ್ದೇಶಕ ದಯಾಳ್ ಪದ್ಮಾನಾಭನ್, ನಾಗಣ್ಣ, ರಿಷಬ್ ಶೆಟ್ಟಿ, ಸಿಂಪಲ್ ಸುನಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ನಿರ್ದೇಶಕ ಸಂಘದ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಶುಭಾಶಯ ಹೇಳಿದರು.

ಇನ್ನು ಸುನೀಲ್ ಪುರಾಣಿಕ್ 50ಕ್ಕೂ ಹೆಚ್ಚು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದಾರೆ. ಹಾಗೂ ಕೆಲವು ಸಿನಿಮಾಗಳಲ್ಲಿಯೂ ಸುನೀಲ್ ಪುರಾಣಿಕ್ ನಟಿಸಿದ್ದಾರೆ.

ABOUT THE AUTHOR

...view details