ಫಲಿತಾಂಶ ಬಂದ ದಿನದಂದು ಸುಮಲತಾ ಸಂಬಂಧಿಕರು, ನಟರಾದ ಯಶ್, ದರ್ಶನ್, ದೊಡ್ಡಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಇತರರು ವಿಜಯೋತ್ಸವ ಆಚರಿಸಿದ್ದರು. ಇಂದು ಸುಮಲತಾ, ಪತಿಯ ಹುಟ್ಟುಹಬ್ಬ ಇರುವುದರಿಂದ ಮಂಡ್ಯದಲ್ಲಿ ಸ್ವಾಭಿಮಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಕ್ಟರಿ ಆಚರಿಸಲಿದ್ದಾರಂತೆ.
ಸ್ವಾಭಿಮಾನದ ಗೆಲುವಿನ ಉತ್ಸಾಹದಲ್ಲಿ ಸುಮಲತಾ : ಮಂಡ್ಯದಲ್ಲಿ ಇಂದು ಅಂಬಿ ಹುಟ್ಟು ಹಬ್ಬದಂದೇ ವಿಜಯೋತ್ಸವ - Sumalatha Ambareesh
ಲೋಕಸಭಾ ಚುನಾವಣೆಯಲ್ಲಿ ಸ್ವಾಭಿಮಾನದ ಗೆಲುವು ಸಾಧಿಸಿರುವ ಸುಮಲತಾ, ಇಂದು ಅಂಬರೀಶ್ ಅವರ ಹುಟ್ಟುಹಬ್ಬದಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಇದೇ ವೇಳೆ ಸುಮಲತಾ ಅವರು ಮಂಡ್ಯದಲ್ಲಿ ಸ್ವಾಭಿಮಾನದ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಜಯೋತ್ಸವ ಆಚರಿಸಲಿದ್ದಾರಂತೆ.
ಸ್ವಾಭಿಮಾನದ ಗೆಲುವಿನ ಉತ್ಸಾಹದಲ್ಲಿ ಸುಮಲತಾ
ಸಂಸದರಾಗಿ ಆಯ್ಕೆ ಮಾಡಿದ ಮಂಡ್ಯ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಸುಮಲತಾ ಅಂಬರೀಶ್, ಇತ್ತೀಚೆಗೆ ಬೆಂಗಳೂರಿನ ಜೆ.ಪಿ. ನಗರದ ನಿವಾಸದಲ್ಲಿ ಸ್ನೇಹಿತರ ಜೊತೆ ವಿಜಯೋತ್ಸವ ಆಚರಿಸಿದ್ದರು. ಆ ಸಂತೋಷದ ಕ್ಷಣಗಳ ಫೋಟೋಗಳು ಇದೀಗ ರಿವೀಲ್ ಆಗಿವೆ.