ಬಹುಭಾಷಾ ನಟಿ, ಸಂಸದೆ ಸುಮಲತಾ ಅಂಬರೀಶ್ಗೆ ಇಂದು 57ನೇ ವರ್ಷದ ಹುಟ್ಟುಹಬ್ಬ. ಅಂಬರೀಶ್ ಅಗಲಿಕೆಯಿಂದ ಕಳೆದ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳದ ಸುಮಲತಾ ಈ ಬಾರಿ ಮಗನೊಂದಿಗೆ ಸರಳವಾಗಿ ಮನೆಯಲ್ಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.
ಅಂಬಿ ನೆನಪಲ್ಲೇ 57ನೇ ವಸಂತ ಪೂರೈಸಿದ ನಟಿ, ಸಂಸದೆ ಸುಮಲತಾ - Darshan wished for Sumalata birthday
ಇಂದು ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಜನ್ಮದಿನ. ದರ್ಶನ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯಕರು ಸುಮಲತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.
ಅಮ್ಮನ ಹುಟ್ಟುಹಬ್ಬದಂದು ಅಭಿಷೇಕ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫನ್ನಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅಭಿಷೇಕ್ ಪ್ಲೇಟ್ನಲ್ಲಿ ಕೇಕ್ ಹಿಡಿದು ಅದನ್ನು ಅಮ್ಮನಿಗೆ ತಿನ್ನಿಸುವ ಬದಲು ಮೂಗಿಗೆ ಬಳಿಯುತ್ತಾರೆ. ಸುಮಲತಾ ಕೂಡಾ ಪುತ್ರನ ತುಂಟಾಟವನ್ನು ಎಂಜಾಯ್ ಮಾಡಿದ್ದಾರೆ. ರಮ್ಯ ಸೇರಿದಂತೆ ಚಿತ್ರರಂಗದ ಇತರ ಗಣ್ಯರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.
ಮತ್ತೊಂದೆಡೆ ಸುಮಲತಾ ಅವರು ನನ್ನ ದೊಡ್ಡ ಮಗ ಎಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಸುಮಲತಾ ಅವರಿಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ. ಒಟ್ಟಿನಲ್ಲಿ ಸುಮಲತಾ, ಅಂಬಿ ನೆನಪಿನಲ್ಲೇ 57 ನೇ ವಸಂತ ಪೂರೈಸಿದ್ದಾರೆ.