ಕರ್ನಾಟಕ

karnataka

ETV Bharat / sitara

ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ನನ್ನು ನಗ್ನವಾಗಿ ತೋರಿಸಬೇಕೆಂದುಕೊಂಡಿದ್ದೆ: ನಿರ್ದೇಶಕ ಸುಕುಮಾರ್ - ವಿಜಯ್ ದೇವರಕೊಂಡ ಜೊತೆ ಸುಕುಮಾರ್ ಸಿನಿಮಾ

ಮೊದಲಿಗೆ 'ಪುಷ್ಪ'ವನ್ನು ವೆಬ್ ಸೀರೀಸ್ ಮಾಡಬೇಕೆಂದುಕೊಂಡಿದ್ದೆ. ಆದರೆ, ಇಷ್ಟು ಒಳ್ಳೆಯ ಕಥೆಯನ್ನು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಭಾವಿಸಿ, ಸಿನಿಮಾ ಮಾಡಿದ್ದೇನೆ ಎಂದು ನಿರ್ದೇಶಕ ಸುಕುಮಾರ್ ಹೇಳಿದ್ದಾರೆ..

Sukumar on shelving nude scene in Pushpa and his first choice Mahesh Babu for lead role
ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್​ನನ್ನು ನಗ್ನವಾಗಿ ತೋರಿಸಬೇಕೆಂದುಕೊಂಡಿದ್ದೆ: ನಿರ್ದೇಶಕ ಸುಕುಮಾರ್

By

Published : Dec 25, 2021, 7:50 PM IST

ಹೈದರಾಬಾದ್, ತೆಲಂಗಾಣ : ರಕ್ತಚಂದನ ಕಳ್ಳಸಾಗಣೆ ಕತೆಯನ್ನು ಹೊಂದಿರುವ ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾದ ಕುರಿತು ಕುತೂಹಲಕಾರಿ ಮಾಹಿತಿಯನ್ನು ನಿರ್ದೇಶಕ ಸುಕುಮಾರ್ ಹೊರ ಹಾಕಿದ್ದಾರೆ.

ಪುಷ್ಪ ಸಿನಿಮಾ ಈಗಾಗಲೇ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಈ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಜಿಲ್ ಅನ್ನು ನಗ್ನ ತೋರಿಸಬೇಕು ಎಂದು ನಿರ್ಧರಿಸಿದ್ದೆನು. ಆದರೆ, ತೆಲುಗು ಪ್ರೇಕ್ಷಕರು ಅಂತಹ ದೃಶ್ಯ ಒಪ್ಪಿಕೊಳ್ಳುವುದಿಲ್ಲ. ಆದ್ದರಿಂದ ನಿರ್ಧಾರವನ್ನು ಬದಲಿಸಿಕೊಂಡೆ ಎಂದು ಸುಕುಮಾರ್ ಹೇಳಿದ್ದಾರೆ.

ರಕ್ತಚಂದನ ಸಾಗಾಣಿಕೆಯ ಮತ್ತೊಂದು ಕತೆ ಮಹೇಶ್​ ಬಾಬುಗೆ ಹೇಳಿದ್ದ ಸುಕುಮಾರ್​

ಈ ಹಿಂದೆ ನಟ ಮಹೇಶ್ ಬಾಬು ಅವರೊಂದಿಗೆ ಇದೇ ವಿಚಾರದ ಕಥೆಯುಳ್ಳ ಸಿನಿಮಾ ಮಾಡಬೇಕೆಂದು ಬಯಸಿದ್ದೆನು. ಆದರೆ, ಅವರು ಒಪ್ಪಿಕೊಳ್ಳಲಿಲ್ಲ. ಮಹೇಶ್ ಬಾಬುಗೆ ಹೇಳಿದ್ದ ಸಿನಿಮಾದ ಕತೆಯೇ ಬೇರೆ, ಪುಷ್ಪ ಸಿನಿಮಾದ ಕತೆಯೇ ಬೇರೆ ಎಂದು ಸುಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಪುಷ್ಪ ನಂತರ ರಾಮ್ ಚರಣ್, ವಿಜಯ್ ದೇವರಕೊಂಡ ಜೊತೆ ಸಿನಿಮಾ

ಮೊದಲಿಗೆ 'ಪುಷ್ಪ'ವನ್ನು ವೆಬ್ ಸೀರೀಸ್ ಮಾಡಬೇಕೆಂದುಕೊಂಡಿದ್ದೆ. ಆದರೆ, ಇಷ್ಟು ಒಳ್ಳೆಯ ಕಥೆಯನ್ನು ಸಿನಿಮಾ ಮಾಡಿದರೆ ಚೆನ್ನಾಗಿರುತ್ತದೆ ಎಂದು ಭಾವಿಸಿ, ಸಿನಿಮಾ ಮಾಡಿದ್ದೇನೆ. ಒಂದೇ ಸಿನಿಮಾದಲ್ಲಿ ಪೂರ್ತಿ ಕತೆಯನ್ನು ಹೇಳಲು ಸಾಧ್ಯವಿಲ್ಲದ ಕಾರಣ ಎರಡು ಭಾಗಗಳಾಗಿ ಕತೆಯನ್ನು ವಿಂಗಡಿಸಿದ್ದೇನೆ ಎಂದು ಸುಕುಮಾರ್ ಹೇಳಿದ್ದಾರೆ.

ಪುಷ್ಪ ಸಿನಿಮಾದ ಎರಡನೇ ಭಾಗವಾದ 'ಪುಷ್ಪ: ದಿ ರೂಲ್' ಚಿತ್ರೀಕರಣ ಫೆಬ್ರವರಿ ಅಥವಾ ಮಾರ್ಚ್ ಮಧ್ಯದಲ್ಲಿ ಪ್ರಾರಂಭವಾಗಲಿದೆ ಎಂದು ಸುಕುಮಾರ್ ಹೇಳಿದ್ದಾರೆ. ಪ್ರಾಜೆಕ್ಟ್ ಮುಗಿದ ನಂತರ ವಿಜಯ್ ದೇವರಕೊಂಡ ಮತ್ತು ರಾಮ್ ಚರಣ್ ಜೊತೆ ಸಿನಿಮಾ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಸನ್ನಿ ಲಿಯೋನ್​​​ 'ಮಧುಬನ್​' ಹಾಡಿಗೆ ಪುರೋಹಿತರ ವಿರೋಧ..!

ABOUT THE AUTHOR

...view details