ಕರ್ನಾಟಕ

karnataka

ETV Bharat / sitara

ಯಾವಾಗ್ಲೂ ಪ್ಯಾಂಟ್​​ ಶರ್ಟ್​​ನಲ್ಲೇ ಇರ್ತಿದ್ದ ಈ ನಟಿ ಸೀರೇಲಿ ಕಾಣೋದು ಹೀಗೆ ನೋಡಿ! - sukruta nag photoshoot

ಅಗ್ನಿ ಸಾಕ್ಷಿ ಧಾರಾವಾಹಿಯ ನಾಯಕ ಸಿದ್ಧಾರ್ಥ್​​ನ ತಂಗಿ ಅಂಜಲಿಯಾಗಿ ಅಭಿನಯಿಸಿದ್ದ ಸುಕೃತಾ ನಾಗ್ ಸೀರೆಯಲ್ಲಿ ಫೋಟೋ ಶೂಟ್​​ ಮಾಡಿಸಿಕೊಂಡು ಅಭಿಮಾನಿಗಳನ್ನು ತನ್ನತ್ತ ಸೆಳೆಯುತ್ತಿದ್ದಾರೆ.

sukruta nag photoshoot
ಯಾವಾಗ್ಲೂ ಪ್ಯಾಂಟ್​​ ಶರ್ಟ್​​ನಲ್ಲಿ ಇರ್ತಿದ್ದ ಈ ನಟಿ ಸೀರೇಲಿ ಕಣುವುದು ಹೀಗೆ ನೋಡಿ!

By

Published : Jan 18, 2020, 1:48 PM IST

ಕಲರ್ಸ್ ಕನ್ನಡ ವಾಹಿನಿಯ ಪ್ರೇಕ್ಷಕರಿಗೆ ಬರೋಬ್ಬರಿ ಎಂಟು ವರ್ಷಗಳ ಕಾಲ ರಂಜಸಿರುವ ಈ ನಟಿಯ ಹೆಸರು ಸುಕೃತಾ ನಾಗ್​. ಕಿರುತೆರೆಯ ಮುದ್ದು ತಂಗಿ ಅಂಜಲಿಯಾಗಿ ಮನ ಸೆಳೆದಿರುವ ಈಕೆ ಅಗ್ನಿ ಸಾಕ್ಷಿ ಧಾರಾವಾಹಿಯ ನಾಯಕ ಸಿದ್ಧಾರ್ಥ್​​ನ ತಂಗಿ ಅಂಜಲಿಯಾಗಿ ಕಿರುತೆರೆ ಪ್ರಿಯರಿಗೆ ಪರಿಚಯ. ಅಂಜಲಿ ಅಲಿಯಾಸ್ ಸುಕೃತಾ ಇದೀಗ ಹೊಸದಾಗಿ ಫೋಟೋ ಶೂಟ್​​ ಮಾಡಿಸಿದ್ದು, ಅದನ್ನು ನೋಡಿದವರು ಒಂದು ಕ್ಷಣ ಬೆರಗಾಗುವುದರಲ್ಲಿ ಎರಡು ಮಾತಿಲ್ಲ!

ಸುಕೃತಾ ನಾಗ್
ಸುಕೃತಾ ನಾಗ್

ಇತ್ತೀಚೆಗಷ್ಟೇ ಅಗ್ನಿಸಾಕ್ಷಿ ಧಾರಾವಾಹಿ ಮುಗಿದಿದ್ದು, ತಮ್ಮ ಕಿರುತೆರೆ ಪಯಣದ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ ಸುಕೃತಾ. ಸದ್ಯ ಟ್ರಡಿಶನಲ್​ ಬಟ್ಟೆ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದು ದಂತದ ಬೊಂಬೆಯಂತೆ ಮಿಂಚುತ್ತಿದ್ದಾರೆ. ಧಾರಾವಾಹಿಯಲ್ಲಿ ಸದಾ ಕಾಲ ಸಲ್ವಾರ್ ಮತ್ತು ಪ್ಯಾಂಟ್ ಶರ್ಟ್​​ನಲ್ಲಿ ಕಾಣಿಸಿಕೊಂಡಿದ್ದು, ಇವರು ಇದೀಗ ಸೀರೆ ಉಟ್ಟು ಅಭಿಮಾನಿಗಳಿಗೆ ಸರ್ಪೈಸ್​​ ಕೊಟ್ಟಿದ್ದಾರೆ.

ಸುಕೃತಾ ನಾಗ್
ಸುಕೃತಾ ನಾಗ್

ತಿಳಿ ನೀಲಿ ಬಣ್ಣದ ಸೀರೆಯುಟ್ಟು ಆ್ಯಂಟಿಕ್ ಆಭರಣ ತೊಟ್ಟು ಮಿರ ಮಿರ ಮಿಂಚುತ್ತಿರುವ ಸುಕೃತಾ ಅವರನ್ನು ಕಂಡಾಗ ಸೀರೇಲಿ ಹುಡುಗಿಯ ನೋಡಲೇ ಬಾರದು ನಿಲ್ಲಲ್ಲ ಟೆಂಪ್​​​ರೇಚರ್​ ಹಾಡು ನೆನಪಾಗುವುದು ಗ್ಯಾರೆಂಟಿ ಅಂದ್ರೆ ತಪ್ಪಾಗಲ್ಲ.

ABOUT THE AUTHOR

...view details