ಕರ್ನಾಟಕ

karnataka

ETV Bharat / sitara

"ಗುಬ್ಬಿ ಮೇಲೆ ಬ್ರಹ್ಮಾಸ್ತ್ರ" ಸುಜೈಗೆ ತಂದಿತು ಸಂಕಷ್ಟ.. - ನನ್ನ ಪ್ರೀತಿಯ ರಾಮು ಸಿನಿಮಾ

ಶ್ರೀನಿವಾಸ ಕಲ್ಯಾಣ, ಬೆಲ್ ಬಾಟಮ್, ಬೀರಬಲ್ ಸಿನಿಮಾಗಳಿಂದ ಹಾಸ್ಯನಟನಾಗಿ ಪ್ರಸಿದ್ದಿ ಪಡೆದಿರುವ ಸುಜೈ ಶಾಸ್ತ್ರೀ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಶೂಟಿಂಗ್​ ವೇಳೆ ತುಂಬಾ ಕಷ್ಟ ಪಟ್ಟಿದ್ದಾರಂತೆ. ಇನ್ನು ಈ ಸಿನಿಮಾವನ್ನು ಸುಜೈ ಶಾಸ್ತ್ರಿಯವರೇ ನಿರ್ದೇಶಿಸಿದ್ದಾರೆ.

ಹಾಸ್ಯನಟ ಸುಜೈ ಶಾಸ್ತ್ರೀ

By

Published : Aug 3, 2019, 9:44 PM IST

ಶ್ರೀನಿವಾಸ ಕಲ್ಯಾಣ, ಬೆಲ್ ಬಾಟಮ್, ಬೀರಬಲ್ ಸಿನಿಮಾಗಳಿಂದ ಹಾಸ್ಯನಟನಾಗಿ ಪ್ರಸಿದ್ದಿ ಪಡೆದಿರುವ ಸುಜೈ ಶಾಸ್ತ್ರೀ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಶೂಟಿಂಗ್​ ವೇಳೆ ತುಂಬಾ ಕಷ್ಟ ಪಟ್ಟಿದ್ದಾರಂತೆ. ಈ ಸಿನಿಮಾವನ್ನು ಸುಜೈ ಶಾಸ್ತ್ರಿಯವರೇ ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ಕುರುಡನ ಪಾತ್ರದಲ್ಲಿ ಅಭಿನಯಿಸಿರುವ ಸುಜೈ, ಈ ಪಾತ್ರದಿಂದ ನಿಜ ಜೀವನದಲ್ಲೂ ಕಷ್ಟ ಪಟ್ಟಿದ್ದಾರಂತೆ. ಕಣ್ಣಿನ ಕಪ್ಪು ಗುಡ್ಡೆಗಳನ್ನು ಪಕ್ಕಕ್ಕೆ ಸರಿಸಿ ಅಭಿನಯ ಮಾಡಬೇಕಿತ್ತಂತೆ. ಈ ಸಂದರ್ಭದಲ್ಲಿ ಸುಜೈಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.

ನನ್ನ ಪ್ರೀತಿಯ ರಾಮು ಸಿನಿಮಾ ಮಾಡುವಾಗ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೂಡ ಇದೇ ರೀತಿಯ ತೊಂದರೆಯನ್ನು ಅನುಭವಿಸಿದ್ದರಂತೆ. ಆ ಸಿನಿಮಾದಲ್ಲಿ ದರ್ಶನ ತನ್ನ ಕಣ್ಣುಗಳ ಕಪ್ಪು ಭಾಗವನ್ನು ಮೇಲಕ್ಕೆ ಮಾಡಿಕೊಂಡು ಅಭಿನಯಿಸಿದ್ದರು. ಈ ಸಮಯದಲ್ಲಿ ದರ್ಶನ್​ಗೆ ತುಂಬಾ ತೊಂದರೆಯಾಗ್ತಾಯಿತ್ತಂತೆ.

ಈ ರೀತಿಯ ನಟನೆಯಿಂದ ಸುಜೈಗೆ ಕಣ್ಣಿನ ಸಮಸ್ಯೆ ಕಂಡುಬಂದಿದ್ದು, ಕೆಲವು ಬಾರಿ ಕಾರು ಚಲಾಯಿಸುವಾಗಲೂ ಸಮಸ್ಯೆ ಕಾಡಿತ್ತಂತೆ. ಆನಂತರ ಕಣ್ಣಿನ ತಜ್ಞರನ್ನು ಸಂಪರ್ಕ ಮಾಡಿ ಅದಕ್ಕೆ ಬೇಕಾದ ಔಷಧಿ ಪಡೆದು ಕೆಲವು ದಿವಸಗಳ ನಂತರ ಮಾಮೂಲು ಸ್ಥಿತಿಗೆ ಬಂದರಂತೆ.

ABOUT THE AUTHOR

...view details