ಸುಧಾರಾಣಿ ತಮ್ಮ ಸಿನಿ ಜರ್ನಿ ಹಾಗೂ ರಾಜ್ಕುಮಾರ್ ಜೊತೆಗಿನ ಒಡನಾಟದ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿದ್ದಾರೆ. ಈ ವೇಳೆ, ರಾಜ್ಕುಮಾರ್ ಜೊತೆ ನಟಿಸುವಾಗ ಆದ ಅನುಭವವನ್ನೂ ಹಂಚಿಕೊಂಡಿದ್ದಾರೆ.
ಅಣ್ಣಾವ್ರ 200ನೇ ಚಿತ್ರದಲ್ಲಿ ನಟಿಸುವಾಗ ಅಹಂ ಬಂದಿತ್ತು ಎಂದ ಸುಧಾರಾಣಿ - rajkumar news
ದೇವತಾ ಮನುಷ್ಯ ಸಿನಿಮಾದಲ್ಲಿ ರಾಜ್ಕುಮಾರ್ ಜೊತೆ ನಟಿಸುತ್ತಿದ್ದೇನೆ ಎಂಬ ಅಹಂ ಬಂದಿತ್ತು ಎಂದು ನಟಿ ಸುಧಾರಾಣಿ ಹೇಳಿಕೊಂಡಿದ್ದಾರೆ.
ದೇವತಾ ಮನುಷ್ಯ ಸಿನಿಮಾದಲ್ಲಿ ನಟಿಸುವಾದ ಅಣ್ಣಾವ್ರ ಮತ್ತು ನಿಮ್ಮ ನಟುವಿನ ನಂಟು ಹೇಗಿತ್ತು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ, ನನ್ನ ಸಿನಿಮಾ ಜರ್ನಿಯಲ್ಲಿ ಅತಿ ಬೇಗನೆ ರಾಜ್ಕುಮಾರ್ ಜೊತೆ ನಟಿಸುವ ಅವಕಾಶ ಸಿಕ್ಕಿತು. ಅದ್ರಲ್ಲೂ ಅಣ್ಣಾವ್ರ ಮಗಳಾಗಿ, ಅವರ 200ನೇ ಸಿನಿಮಾದಲ್ಲಿ ನಟಿಸುವ ಒಳ್ಳೆ ಅವಕಾಶ ಸಿಕ್ಕಿತು ಎಂದಿದ್ದಾರೆ.
ಇದೇ ವೇಳೆ ತಮ್ಮ ಮಾತು ಮುಂದುವರಿಸಿದ ನಟಿ, ಬಹುಶಃ ನನ್ನ ಜೀವನದಲ್ಲಿ ನನಗೆ ಯಾವತ್ತು ಅಹಂ ಬಂದಿರಲಿಲ್ಲ ಅನಿಸುತ್ತೆ. ಆದ್ರೆ ಅಂದು ದೇವತಾ ಮನುಷ್ಯ ಸಿನಿಮಾದಲ್ಲಿ ರಾಜ್ಕುಮಾರ್ ಜೊತೆ ನಟಿಸುತ್ತಿದ್ದೇನೆ ಎಂಬ ಅಹಂ ಬಂದಿತ್ತು ಎಂದಿದ್ದಾರೆ. ನನಗೆ ಚಿಕ್ಕ ವಯಸ್ಸಿನಿಂದಲೂ ಅಪ್ಪಾಜಿಯ ಹುಚ್ಚು ಅಭಿಮಾನಿ. ಅವರ ಒಂದೂ ಸಿನಿಮಾವನ್ನು ಬಿಡದೇ ನೋಡುತ್ತಿದ್ದೆ. ಅದ್ರಲ್ಲೂ ಆ ಸಿನಿಮಾದಲ್ಲಿ ಅವರ ಜೊತೆ ಎರಡು ಹಾಡಿನಲ್ಲಿ ನಟಿಸಿರುವುದು ಅದ್ಭುತ ಅನುಭವ ಎಂದು ಸಂತೋಷ ಹಂಚಿಕೊಂಡಿದ್ದಾರೆ.