ಕನ್ನಡ ಖ್ಯಾತ ನಟಿ ಸುಧಾರಾಣಿ ಸದ್ಯ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಸಖತ್ ಬ್ಯುಸಿ ಇದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುಧಾರಾಣಿ ಇದೀಗ ರಾಘವೇಂದ್ರ ರಾಜ್ಕುಮಾರ್ ನಟನೆಯ ಬೆಳಕು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೇ ವೇಳೆ ತಮ್ಮ ಮಗಳ ಸಿನಿಮಾ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.
ಮಗಳ ಸಿನಿ ಎಂಟ್ರಿ ಬಗ್ಗೆ ಸುಧಾರಾಣಿ ಪ್ರತಿಕ್ರಿಯೆ... ಬಣ್ಣದ ಲೋಕಕ್ಕೆ ಎಂಟ್ರಿ ನೀಡ್ತಾರಾ ನಿಧಿ!? - ಸುಧಾರಾಣಿ ಸುದ್ದಿ
ಸುಧಾರಾಣಿ ರಾಘವೇಂದ್ರ ರಾಜ್ಕುಮಾರ್ ನಟನೆಯ ಬೆಳಕು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು,ಇದೇ ವೇಳೆ ತಮ್ಮ ಮಗಳ ಸಿನಿಮಾ ಪ್ರವೇಶದ ಬಗ್ಗೆ ಮಾತನಾಡಿದ್ದಾರೆ.
ಮಗಳ ಸಿನಿ ಎಂಟ್ರಿ ಬಗ್ಗೆ ಬಾಯ್ಬಿಟ್ಟ ಸುಧಾರಾಣಿ
ನಿಮ್ಮ ಮಗಳ ಸಿನಿ ಎಂಟ್ರಿ ಬಗ್ಗೆ ಹೇಳಿ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ನನ್ನ ಮಗಳಿನ್ನೂ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಲಾ ಓದುತ್ತಿದ್ದಾಳೆ. ಅವಳು ಸಿನಿಮಾ ಬರಬೇಕು ಎಂಬ ಯೋಚನೆ ಏನಿಲ್ಲ. ಅಲ್ಲದೇ ಅವಳು ಹೀಗೇ ಆಗಬೇಕು, ಹಾಗೆ ಆಗ್ಬೇಕು ಎಂದು ನಾನು ನಿರ್ಧಾರ ಮಾಡಲ್ಲ. ಅವಳ ನಿರ್ಧಾರಕ್ಕೆ ಬಿಟ್ಟಿದ್ದೇನೆ ಎಂದರು.
ಸದ್ಯ ವಿದ್ಯಾಭ್ಯಾಸಲ್ಲಿ ತೊಡಗಿದ್ದಾಗಲೇ ಮುಂದೆ ಸಿನಿಮಾಕ್ಕೆ ಎಂಟ್ರಿ ಕೊಡಬೇಕು ಎಂಬ ಆಸೆ ಅವರಲ್ಲಿದೆ, ಅವಳಿಷ್ಟ ಎಂದು ಸುಧಾರಾಣಿ ಹೇಳಿದ್ದಾರೆ.
Last Updated : Feb 16, 2021, 8:05 PM IST