ಭೂತಾನ್,ನೇಪಾಳ ಸೇರಿದಂತೆ ವಿಶ್ವದ ನಾನಾ ಕಡೆ ಕುಸ್ತಿ ಆಡಲು ರೆಡಿಯಾಗಿರುವ ಸ್ಯಾಂಡಲ್ವುಡ್ನ 'ಪೈಲ್ವಾನ್' ಅಖಾಡಗಳನ್ನು ಸಿದ್ಧಗೊಳಿಸುತ್ತಿದ್ದಾನೆ.
2,500 ಪರದೆಗಳ ಮೇಲೆ ಧೂಳೆಬ್ಬಿಸಲು ಪ್ಲಾನ್ ಮಾಡಿರುವ 'ಪೈಲ್ವಾನ್' ವಿತರಣೆ ಹಕ್ಕುಗಳು ದೊಡ್ಡ ಸಂಸ್ಥೆಗಳ ಪಾಲಾಗುತ್ತಿವೆ. ಸದ್ಯ ತೆಲುಗು ಅವತರಣಿಕೆಯ ಬಿಡುಗಡೆಯ ಜವಾಬ್ದಾರಿ 'ವರಾಹಿ ಚಲನಚಿತ್ರಂ' ಸಂಸ್ಥೆಗೆ ಸೇರಿದೆ. ಕನ್ನಡದ 'ಕೆಜಿಎಫ್' ಚಿತ್ರವನ್ನು ತೆಲುಗು ರಾಜ್ಯಗಳಲ್ಲಿ (ಆಂಧ್ರ-ತೆಲಂಗಾಣ) ಬೃಹತ್ ಪ್ರಮಾಣದಲ್ಲಿ ಚಿತ್ರಮಂದಿರಕ್ಕೆ ತಂದಿದ್ದ ವರಾಹಿ, ಈಗ ಕಿಚ್ಚ ಸುದೀಪ್ ಅವರ 'ಪೈಲ್ವಾನ್'ನನ್ನು ಆಂಧ್ರ ಹಾಗೂ ತೆಲಂಗಾಣಗಳ ಚಿತ್ರಮಂದಿರಗಳಿಗೆ ತಲುಪಿಸುವ ಹೊಣೆ ಹೊತ್ತಿದೆ. ಮತ್ತೊಂದು ವಿಶೇಷ ಏನಂದ್ರೆ, ಕಿಚ್ಚ ಸುದೀಪ್ ನಟಿಸಿದ್ದ 'ಈಗ' ಸಿನಿಮಾ ಚಿತ್ರವನ್ನು ವರಾಹಿ ಸಂಸ್ಥೆಯ ಮಾಲೀಕ ಸಾಯಿ ಕೊರ್ರಪತಿ ಅವರೇ ನಿರ್ಮಿಸಿದ್ದರು. ಸದ್ಯ ಪೈಲ್ವಾನ್ ಚಿತ್ರದ ಬಿಡುಗಡೆಯ ಕೆಲಸ ಇವರೇ ವಹಿಸಿಕೊಂಡಿರುವುದು ಸುದೀಪ್ ಅವರಿಗೆ ತುಂಬ ಸಂತೋಷ ತಂದಿದೆ.