ಕರ್ನಾಟಕ

karnataka

ETV Bharat / sitara

ತೊಡೆ ತಟ್ಟಿ ಬಂದ ಪೈಲ್ವಾನರು... ಬಾರೋ ಪೈಲ್ವಾನ್ ಹಾಡು ಸೂಪರ್! - Bollywood actor Suneel Shetty

​​​​​​​ಕಿಚ್ಚ ಸುದೀಪ್​ ಅಭಿನಯದ ಪೈಲ್ವಾನ್ ಸಿನಿಮಾದ ಎರಡನೇ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆ ಬಾದ್​ಷಾ ಕಿಚ್ಚ ಸುದೀಪ್ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.

ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆ ಬಾದ್​ಷಾ ಕಿಚ್ಚ ಸುದೀಪ್

By

Published : Jul 30, 2019, 11:04 PM IST

ಕಿಚ್ಚ ಸುದೀಪ್​ ಅಭಿನಯದ ಪೈಲ್ವಾನ್ ಸಿನಿಮಾದ ಎರಡನೇ ಲಿರಿಕಲ್ ಸಾಂಗ್ ರಿಲೀಸ್ ಆಗಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಹಾಡು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಿದ್ದು, ಅದ್ದೂರಿ ಮೇಕಿಂಗ್​ನಿಂದ ಕೂಡಿದೆ.

ಕನ್ನಡದಲ್ಲಿ ಬಾರೋ ಪೈಲ್ವಾನ ಎಂಬ ಹಾಡಿಗೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಗಾಯಕರಾದ ವಿಜಯ್ ಪ್ರಕಾಶ್, ಕೈಲಾಶ್ ಖೇರ್ ಹಾಗೂ ಚಂದನ್ ಶೆಟ್ಟಿ ಧ್ವನಿ ನೀಡಿದ್ದಾರೆ. ಮಾಸ್ ಆಗಿರುವ ಈ ಹಾಡಿನಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಜೊತೆ ಬಾದ್​ಷಾ ಕಿಚ್ಚ ಸುದೀಪ್ ನೂರಾರು ಡ್ಯಾನ್ಸರ್​ಗಳ ಜೊತೆ ಬೊಂಬಾಟ್ ಸ್ಟೆಪ್ ಹಾಕಿದ್ದಾರೆ.

ಇನ್ನು ಅರ್ಜುನ್ ಜನ್ಯ ಸಂಗೀತ ಇರುವ ಈ ಹಾಡು ಅಭಿಮಾನಿಗಳನ್ನು ಮನರಂಜಿಸುತ್ತಿದೆ. ಬಾಲಿವುಡ್ ನೃತ್ಯ ನಿರ್ದೇಶಕ ಗಣೇಶ್ ಅಚಾರ್ಯ ನೃತ್ಯ ಸಂಯೋಜನ ಮಾಡಿದ್ದು, ಅದ್ದೂರಿ‌ ಸೆಟ್​ನಲ್ಲಿ ಸುದೀಪ್ ಮಸ್ತ್ ಹೆಜ್ಜೆ ಹಾಕಿದ್ದಾರೆ. ಈ ಹಾಡು ಯೂಟ್ಯೂಬ್‌ನಲ್ಲಿ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 4 ಲಕ್ಷ ಜನ ವೀಕ್ಷಿಸಿದ್ದಾರೆ.

ಈ ಚಿತ್ರದಲ್ಲಿ, ಆಕಾಂಕ್ಷಾ ಸಿಂಗ್, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ, ಅವಿನಾಶ್ ಹೀಗೆ ದೊಡ್ಡ ತಾರಾ ಬಳಗವಿದೆ.

ABOUT THE AUTHOR

...view details