ಕರ್ನಾಟಕ

karnataka

ETV Bharat / sitara

ಕಿಶನ್ ಬೆಳಗಲಿ 'ಡಿಯರ್ ಕಣ್ಮಣಿ' ಸಿನಿಮಾಗೆ ಸಾಥ್ ನೀಡಿದ ಪೈಲ್ವಾನ್ - Vismaya film banner

ವಿಸ್ಮಯ ಫಿಲ್ಮ್ ಬ್ಯಾನರ್ ಅಡಿಯಲ್ಲಿ ವಿಸ್ಮಯ ನಿರ್ದೇಶಿಸುತ್ತಿರುವ 'ಡಿಯರ್​ ಕಣ್ಮಣಿ' ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಚಿತ್ರದಲ್ಲಿ ಬಿಗ್​ ಬಾಸ್ ಖ್ಯಾತಿಯ ಕಿಶನ್ ಬೆಳಗಲಿ ಹಾಗೂ ಯುವನಟ ಪ್ರವೀಣ್ ನಟಿಸುತ್ತಿದ್ದು ಚಿತ್ರಕ್ಕೆ ಸುದೀಪ್ ಶುಭ ಕೋರಿದ್ದಾರೆ.

Dear Kanmani
'ಡಿಯರ್ ಕಣ್ಮಣಿ'

By

Published : Feb 15, 2021, 7:23 PM IST

ಬಿಗ್‍ಬಾಸ್ ಖ್ಯಾತಿಯ ಕಿಶನ್ ಬೆಳಗಲಿ ಹಾಗೂ ಯುವ ನಟ ಪ್ರವೀಣ್ 'ಡಿಯರ್ ಕಣ್ಮಣಿ' ಚಿತ್ರದಲ್ಲಿ ನಟಿಸುತ್ತಿದ್ದು ಈ ಚಿತ್ರಕ್ಕೆ ಸುದೀಪ್ ಶುಭ ಕೋರಿದ್ದಾರೆ. ಮಹಿಳಾ ನಿರ್ದೇಶಕಿ ವಿಸ್ಮಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗುಟ್ಟೆ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಇಂದು ಸೆಟ್ಟೇರಿದ 'ಡಿಯರ್ ಕಣ್ಮಣಿ' ಸಿನಿಮಾಗೆ ಸುದೀಪ್​​​​ ಕ್ಲ್ಯಾಪ್ ಮಾಡಿ, ಶೀರ್ಷಿಕೆಯನ್ನು ಬಿಡುಗಡೆಗೊಳಿಸಿ ಚಿತ್ರಕ್ಕೆ ಶುಭ ಕೋರಿದ್ದಾರೆ.

'ಡಿಯರ್ ಕಣ್ಮಣಿ' ಸುದ್ದಿಗೋಷ್ಠಿ

ಈ ಸಿನಿಮಾದಲ್ಲಿ ಪ್ರವೀಣ್ ಗೌಡ ನಟಿಸುತ್ತಿದ್ದಾರೆ. ನಾನು ಅವರಿಗಾಗಿ ಈ ಕಾರ್ಯಕ್ರಮಕ್ಕೆ ಬಂದೆ. ವಿಸ್ಮಯ ಹಾಗೂ ಅವರ ತಂಡ ಬಹಳ ಶ್ರಮ ವಹಿಸಿ ಕೆಲಸ ಮಾಡುತ್ತಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಸುದೀಪ್​​​​​ ಶುಭ ಹಾರೈಸಿದರು. ನಿರ್ದೇಶಕಿ ವಿಸ್ಮಯ ಮಾತನಾಡಿ ಲವ್ ಜೋನರ್ ಸಿನಿಮಾ ಇದು. ಮೂವರು ಇದ್ದ ಮಾತ್ರಕ್ಕೆ ಇದು ತ್ರಿಕೋನ ಪ್ರೇಮ ಕಥೆ ಎಂದುಕೊಳ್ಳಬೇಕಿಲ್ಲ. ಇದು ಪಕ್ಕಾ ಫ್ಯಾಮಿಲಿ ಎಂಟರ್​​​​ಟೈನರ್​​​​​​​​​​​​​​​​​​​​​​​​​​​​​​​​​​​​​​​​​​​​​​​​. ನಾವೆಲ್ಲರೂ ಸ್ನೇಹಿತರೇ ಆದರೂ ಸ್ಕ್ರಿಪ್ಟ್ ಮೇಲೆ ನಂಬಿಕೆ ಇಟ್ಟು ಕೆಲಸ ಮಾಡುತ್ತಿದ್ದೇವೆ ಎಂದರು. ನಟ ಕಿಶನ್ ಮಾತನಾಡಿ, ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಖುಷಿ ಇದೆ ಎಂದು ಸಂತೋಷ ಹಂಚಿಕೊಂಡರು.

'ಡಿಯರ್ ಕಣ್ಮಣಿ'

ಇದನ್ನೂ ಓದಿ:ಪ್ರೇಮಿಗಳ ದಿನಕ್ಕೆ​ ಪ್ರಭಾಸ್ ಗಿಫ್ಟ್ - 'ರಾಧೆಶ್ಯಾಮ್' ಟೀಸರ್​ ಔಟ್​.. ಬಿಡುಗಡೆ ದಿನಾಂಕವೂ ಪ್ರಕಟ

ಮತ್ತೊಬ್ಬ ನಟ ಪ್ರವೀಣ್ ಗೌಡ ಮಾತನಾಡಿ ಸುದೀಪ್ ನನಗೆ ಅಣ್ಣನಿಂದ್ದಂತೆ. ಮೊದಲಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಕಾರ್ಯಕ್ರಮಕ್ಕೆ ಬಂದು ಹರಸಿದ್ದಾರೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಎಲ್ಲರಿಗೂ ಇಷ್ಟ ಆಗುತ್ತದೆ. ಇದಕ್ಕಾಗಿ ಈಗಾಗಲೇ ತಯಾರಿ ನಡೆಸಿದ್ದೇನೆ. ಕ್ರಿಕೆಟ್ ಅಂಗಳದಿಂದ ಸಿನಿಮಾ ಹೇಗೆ..? ಎಂದು ಎಲ್ಲರೂ ಕೇಳುತ್ತಾರೆ. ಆದರೆ ಇವೆರಡೂ ಕ್ಷೇತ್ರದಲ್ಲೂ ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಇದೇ ನನ್ನನ್ನು ಸಿನಿಮಾವರೆಗೂ ಕರೆದುಕೊಂಡು ಬಂದಿದೆ ಎಂದರು. ಚಿತ್ರಕ್ಕೆ ಮಧುಸೂದನ್ ಛಾಯಾಗ್ರಹಣವಿದ್ದು, ವಿಸ್ಮಯ ಫಿಲ್ಮ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಆಪ್ತರ ಚಿತ್ರಕ್ಕೆ ಶುಭ ಕೋರಿದ ಸುದೀಪ್

ABOUT THE AUTHOR

...view details