ಸ್ಯಾಂಡಲ್ವುಡ್ನಲ್ಲಿ ಯಾವುದೇ ಹೊಸ ಸಿನಿಮಾಗಳು ಆರಂಭವಾದರೂ ಕಿಚ್ಚ ಸುದೀಪ್ ಸಿನಿಮಾ ಮುಹೂರ್ತ, ಆಡಿಯೋ ಬಿಡುಗಡೆ ಕಾರ್ಯಕ್ರಮಗಳಿಗೆ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿ ಬರುತ್ತಾರೆ. ಜೆಕೆ ಅಭಿನಯಿಸುತ್ತಿರುವ 'ಐರಾವನ್' ಚಿತ್ರದ ಟೀಸರ ್ ನಿನ್ನೆ ಬಿಡುಗಡೆಯಾಗಿದ್ದು, ಸುದೀಪ್ ಕೂಡಾ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿ ಶುಭ ಕೋರಿದ್ದಾರೆ.
ಐರಾವನ್ ಚಿತ್ರದ ಟೀಸರ್ ನೋಡಿದರೆ ಚಿತ್ರದ ಮೇಲೆ ಭರವಸೆ ಉಂಟಾಗುತ್ತದೆ. ಜೆಕೆ ಕೂಡಾ ಟೀಸರ್ನಲ್ಲಿ ಚೆನ್ನಾಗಿ ಕಾಣುತ್ತಿದ್ದಾರೆ ಎಂದು ಜೆಕೆಗೆ ಸುದೀಪ್ ಕಾಂಪ್ಲಿಮೆಂಟ್ಸ್ ನೀಡಿದರು. ಇಂದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಆಧಾರಿತ ಚಿತ್ರವಾಗಿದೆ. ಚಿತ್ರದಲ್ಲಿ ಜೆಕೆ ಗೆ ಜೋಡಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. ಯುವ ನಿರ್ದೇಶಕ ರಾಮ್ಸ್ ರಂಗ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹಲವು ಚಿತ್ರಗಳಿಗೆ ಸಹ ಹಾಗೂ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ರಾಮ್ಸ್ ರಂಗ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ.ಜೆಕೆ, ವಿವೇಕ್, ಅದ್ವಿತಿ ಶೆಟ್ಟಿ ಜೊತೆಗೆ ಅವಿನಾಶ್, ಕೃಷ್ಣ ಹೆಬ್ಬಾರ್ ,ವಂದನ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.