ಕರ್ನಾಟಕ

karnataka

ETV Bharat / sitara

'ಕೋಟಿಗೊಬ್ಬ'ನ ಹುಟ್ಟುಹಬ್ಬಕ್ಕೆ ಕಿಚ್ಚನ ಭಾವನಾತ್ಮಕ ಶುಭಾಶಯ - ವಿಷ್ಣುವರ್ಧನ್​ ಹುಟ್ಟು ಹಬ್ಬ

ಸುದೀಪ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುದಾದಾಗೆ ಭಾವನಾತ್ಮಕ ಶುಭಾಷಯ ಕೋರಿದ್ದಾರೆ. ಹುಟ್ಟುಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಅಗತ್ಯ ನಮಗಿತ್ತು ಎಂದಿದ್ದಾರೆ.

ಕೋಟಿಗೊಬ್ಬನಿಗೆ ಕಿಚ್ಚನ ಭಾವನಾತ್ಮಕ ಶುಭಾಶಯ

By

Published : Sep 18, 2019, 12:48 PM IST

ಇಂದು ಸಾಹಸ ಸಿಂಹ ಡಾ. ವಿಷ್ಣುವರ್ಧನ್​ರ ಹುಟ್ಟುಹಬ್ಬ. ಇದಕ್ಕೆ "ರಾಮಾಚಾರಿಯ" ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈಯ್ಯುತ್ತಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ವಿಷ್ಣುವರ್ಧನ್​ರ ಫೋಟೋಗಳನ್ನು ಹಾಕಿಕೊಂಡು ಹ್ಯಾಪಿ ಬರ್ತ್​ ಡೇ ದಾದಾ ಅಂತ ಬರೆದುಕೊಂಡಿದ್ದಾರೆ. ​ಆದ್ರೆ ಕಿಚ್ಚ ಸುದೀಪ್​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುದಾದಾಗೆ ಭಾವನಾತ್ಮಕ ಶುಭಾಶಯ ಕೋರಿದ್ದಾರೆ.

ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಷ್ಣುವರ್ಧನ್​ಗೆ ಶುಭಾಶಯ ಕೋರಿರುವ ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್​​​, ಹುಟ್ಟುಹಬ್ಬದ ಶುಭಾಶಯ ಅಪ್ಪಾಜಿ. ನಿಮ್ಮ ಮೇಲೆ ಪ್ರೀತಿ ಎಷ್ಟು ಇದೆಯೋ, ನಮ್ಮನ್ನು ಬಿಟ್ಟು ಹೋಗಿದ್ದಕ್ಕೆ ಕೋಪವೂ ಅಷ್ಟೇ ಇದೆ. ಅನಾಥರಾಗಿದ್ದೀವಿ. ಬಹಳ ಬೇಗೆ ಹೋಗಿಬಿಟ್ಟಿರಿ. ನಿಮಗೆ ನಮ್ಮೆಲ್ಲರ ಅಗತ್ಯ ಎಷ್ಟಿತ್ತೋ ನನಗೆ ಗೊತ್ತಿಲ್ಲ. ಆದರೆ ನಿಮ್ಮ ಅಗತ್ಯ ನಮಗಿತ್ತು. ನಿಮ್ಮನ್ನು ನೆನೆಯುವ, ಪ್ರೀತಿಸುವ, ಅಭಿಮಾನಿಯಲ್ಲೊಬ್ಬ ಕಿಚ್ಚ ಎಂದು ಬರೆದುಕೊಂಡಿದ್ದಾರೆ ಸುದೀಪ್​.

ABOUT THE AUTHOR

...view details