ಸ್ಯಾಂಡಲ್ವುಡ್ನಲ್ಲಿ ಇತ್ತೀಚೆಗೆ ಹೊಸ ಹೊಸ ಸಿನಿಮಾಗಳು ಮೂಡಿಬರುತ್ತಿದ್ದು, ಪ್ರೇಕ್ಷಕ ಮಹಾಷಯನ ಮನ ಸೂರೆ ಮಾಡುತ್ತಿವೆ. ಈ ಪಟ್ಟಿಗೆ ಇದೀಗ ಗೀತಾ ಸಿನಿಮಾ ಸೇರಿಕೊಳ್ಳಲು ಅವಣಿಸುತ್ತಿದೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮ ಇತ್ತಿಚೆಗೆ ಹೆಚ್ಚು ಸದ್ದು ಮಾಡುತ್ತಿದೆ. ಸಿನಿಮಾದಲ್ಲಿ ಗಣೇಶ್ ವಿಶೇಷ ಪಾತ್ರದಲ್ಲಿ ಕಾಣಿಸಿದ್ದಾರಂತೆ. ಹಾಗೂ ಸಿನಿಮಾದಲ್ಲಿ ಮೂರು ಜನ ನಾಯಕಿಯರು ಅಭಿನಯಿಸಿದ್ದಾರೆ.
ಇನ್ನು ಈ ಸಿನಿಮಾದಲ್ಲಿ ಗೋಕಾಕ್ ಚಳುವಳಿಯ ಸಂಬಂಧಟ್ಟಂತೆ ಕತೆಯನ್ನು ಕಟ್ಟಲಾಗಿದ್ದು, ಕನ್ನಡಾಭಿಮಾನ ಸಾರುವ ಚಿತ್ರ ಇದಾಗಿದೆ.
ಇದೇ 27ಕ್ಕೆ ತೆರೆಗೆ ಅಪ್ಪಳಿಸಲು ಬರುತ್ತಿರುವ ಈ ಸಿನಿಮಾಕ್ಕೆ ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಭಕೋರಿರುವ ಕಿಚ್ಚ, ಸಿನಿಮಾ ಕಾನ್ಸೆಪ್ಟ್ ಹಾಗೂ ಸಿನಿಮಾದ ಟ್ರೈಲರ್ ಉತ್ತಮವಾಗಿದೆ. 27ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ. ಸಿನಿಮಾಕ್ಕೆ ನನ್ನ ಶುಭ ಆರೈಕೆ ಎಂದು ಬರೆದುಕೊಂಡಿದ್ದಾರೆ.