ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಆಟಗಾರ ಅಂತಾ ಕರೆಯಿಸಿಕೊಂಡಿರುವ ಭಾರತದ ಲಕ್ಕಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 32ನೇ ಬರ್ತ್ ಡೇ ಖುಷಿಯಲ್ಲಿರೋ ವಿರಾಟ್ ಕೊಹ್ಲಿಗೆ ಪ್ರಪಂಚದಾದ್ಯಂತ ಶುಭಾಶಯಗಳು ಹರಿದುಬರುತ್ತಿವೆ.
ವಿರಾಟ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಸುದೀಪ್ - sudeep news
ಭಾರತದ ಲಕ್ಕಿ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 32ನೇ ಬರ್ತ್ ಡೇ ಖುಷಿಯಲ್ಲಿರೋ ವಿರಾಟ್ ಕೊಹ್ಲಿಗೆ ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ.

ವಿರಾಟ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಕಿಚ್ಚಾ
ಇದೀಗ ಸ್ಯಾಂಡಲ್ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಕೂಡ ಕೊಹ್ಲಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಯುವ ಪ್ರತಿಭೆಗಳಿಗೆ ಸ್ಫೂರ್ತಿ. ಅದ್ಭುತ ಯಶಸ್ಸಿನ ಜೊತೆಗೆ ನಿಮ್ಮ ಗುರಿಗಳನ್ನು ಸಾಧಿಸುವಂತಾಗಲಿ. ಬಾಕಿ ಉಳಿದಿರುವ ಐಪಿಎಲ್ ಪಂದ್ಯಗಳಿಗಾಗಿ ನಿಮಗೆ ಆಲ್ ದಿ ಬೆಸ್ಟ್ ಅಂತಾ ಕಿಚ್ಚ ಸುದೀಪ್ ವಿಶ್ ಮಾಡಿದ್ದಾರೆ.
ಈಗಾಗಲೇ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿ ಈ ಬಾರಿ ಕಪ್ ಗೆಲ್ಲುವ ವಿಶ್ವಾಸವನ್ನು ವಿರಾಟ್ ಕೊಹ್ಲಿ ಮೂಡಿಸಿದ್ದಾರೆ. ಎಲ್ಲಾರೂ ಅಂದುಕೊಂಡಂತೆ ವಿರಾಟ್ ಈ ಐಪಿಎಲ್ನಲ್ಲಿ ಕಪ್ ಗೆದ್ದು ಬೀಗಲಿ ಅನ್ನೋದು ಅಭಿಮಾನಿಗಳ ಆಶಯ.