ಕರ್ನಾಟಕ

karnataka

ETV Bharat / sitara

ಐಪಿಎಲ್​​ಗೆ ಕನ್ನಡ ಕಾಮೆಂಟರಿ ಮಾಡಲಿರುವ 'ಹೆಬ್ಬುಲಿ': ಕ್ರಿಕೆಟ್​ ನೋಡಿ ಕಿಚ್ಚನ ಜೊತೆಯಲಿ - sudeep to commentary in IPL

ಐಪಿಎಲ್​​ ಕ್ರಿಕೆಟ್ ಪಂದ್ಯಾವಳಿಯ ಕನ್ನಡ ಲೈವ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕಾಮೆಂಟರಿ ಜೊತೆಗೆ ತಮ್ಮ ಕ್ರಿಕೆಟ್ ಅನುಭವವನ್ನ ಹಂಚಿಕೊಳ್ಳಲಿದ್ದಾರಂತೆ.

Sudeep will do IPL commentary
ಐಪಿಎಲ್​​ ಕಮೆಂಟ್ರಿ ಮಾಡಲಿದೆ 'ಹೆಬ್ಬುಲಿ' : ಅಭಿಮಾನಿಗಳಿಗೆ ಫುಲ್​ ಖುಶ್​​

By

Published : Sep 19, 2020, 7:12 PM IST

ಐಪಿಎಲ್ 13ನೇ ಆವೃತ್ತಿ ಶುರುವಾಗಿದೆ. 53 ದಿನಗಳ ಕಾಲ ಫ್ಯಾಮಿಲಿ ಜೊತೆ ಎಂಜಾಯ್ ಮಾಡುವ ಟೈಮ್ ಬಂದಿದೆ. ಅಬುಧಾಬಿಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಎದುರಾಗಲಿವೆ.

ಈ ಕೊರೊನಾದಿಂದಾಗಿ ಸ್ಟೇಡಿಯಂನಲ್ಲಿ ಜನರಿಲ್ಲದೆ, ಬರೀ ಕ್ರಿಕೆಟ್ ಆಟಗಾರರು ಮಾತ್ರ ಮುಂಜಾಗ್ರತೆಯಿಂದ ಆಟವಾಡಬೇಕಿದೆ. ಹೀಗಾಗಿ ಅಭಿಮಾನಿಗಳು ಇಲ್ಲದ ಸ್ಟೇಡಿಯಂನಲ್ಲಿ ಮತ್ತಷ್ಟು ಕಿಕ್ ಕೊಡಲು, ಸ್ಯಾಂಡಲ್ ವುಡ್​​ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬರ್ತಾ ಇದ್ದಾರೆ‌.

ಐಪಿಎಲ್​​ಗೆ ಕನ್ನಡ ಕಾಮೆಂಟರಿ ಮಾಡಲಿರುವ 'ಹೆಬ್ಬುಲಿ'

ಈ ಕ್ರಿಕೆಟ್ ಪಂದ್ಯಾವಳಿಯ ಕನ್ನಡ ಲೈವ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಬಂದು ಕ್ರಿಕೆಟ್ ಕಾಮೆಂಟರಿ ಜೊತೆಗೆ ತಮ್ಮ ಕ್ರಿಕೆಟ್ ಅನುಭವವನ್ನ ಹಂಚಿಕೊಳ್ಳಲಿದ್ದಾರಂತೆ. ಈ ಮಾತನ್ನ ಸ್ವತಃ ಕಿಚ್ಚ ಸುದೀಪ್ ಹೇಳಿದ್ದು ಇಂದು ನಡೆಯುವ ಕ್ರಿಕೆಟ್ ಮ್ಯಾಚ್​​ನಲ್ಲಿ ಹೆಬ್ಬುಲಿಯ ಉಪಸ್ಥಿತಿ ಮತ್ತಷ್ಟು ಕಿಕ್ ಕೊಡಲಿದೆ.

ABOUT THE AUTHOR

...view details